Job Description: * ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯು (IISC) ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯವಾ ಗಿ ಗುರುತಿಸಿಕೊಂಡಿದೆ.* 2023 ನೇ ಸಾಲಿನ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ ಅಗ್ರ 150 ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ ಸ್ಥಾನ ಪಡೆಯುವ ಸಮೀಪದಲ್ಲಿದೆ.* ಕ್ಯೂಎಸ್‌(ಕ್ವಾಕ್ವಾರೆಲ್ಲಿ ಸೈಮಂಡ್ಸ್) ಶ್ರೇಯಾಂಕದ ಅಗ್ರ 200 ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರಿನ IISC ಸಂಶೋಧನಾ ಸಂಸ್ಥೆ ವರ್ಷದಿಂದ ವರ್ಷಕ್ಕೆ ಮೇಲೇರುತ್ತಿದ್ದು, ಕಳೆದ ಬಾರಿಗಿಂತ 31 ಸ್ಥಾನ ಜಿಗಿತಕಂಡು, ಪ್ರಸ್ತುತ 155 ನೇ ರ್ಯಾಂಕ್ ಗೆ ಏರಿದೆ.* ಕಳೆದ ಜಾರಿ 186 ನೇ ರ್ಯಾಂಕ್ ನಲ್ಲಿದ್ದ ಐಐಎಸ್‌ಸಿ, ಬಾಂಬೆ ಐಐಟಿ ಮತ್ತು ದೆಹಲಿ ಐಐಟಿಗಿಂತ ಆಗ್ರ ಶ್ರೇಯಾಂಕದ ಭಾರತೀಯ ವಿಶ್ವವಿದ್ಯಾಲಯ ಎನ್ನುವ ಯಶಸ್ಸು ಪಡೆದುಕೊಂಡಿದೆ.* ಹಾರ್ವರ್ಡ್ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯ ಮತ್ತು ಎಂಐಟಿಗಿಂತಲೂ ಮುನ್ನಡೆ ಸಾಧಿಸಿ, ವಿಶ್ವದ ಉನ್ನತ ಸಂಶೋಧನಾ ವಿಶ್ವವಿದ್ಯಾಲಯವೆನಿಸಿಕೊಂಡಿದೆ.