Job Description: * ಪ್ರಸ್ತುತ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.* ರಾಮನಾಥ್ ಕೋವಿಂದ್ ನಂತರ ದೇಶದ ಮುಂದಿನ ಪ್ರಥಮ ಪ್ರಜೆ ಯಾರಾಗಲಿದ್ದಾರೆ ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ * ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.* ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ ಇದರ ಮತ ಎಣಿಕೆ ಕಾರ್ಯ (Counting) ಜುಲೈ 21 ಕ್ಕೆ ನಡೆಯಲಿದೆ* ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,880 ಮತದಾರರು ಮತ ಚಲಾಯಿಸುತ್ತಾರೆ. ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.* ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೆಸರು ಕೇಳಿ ಬಂದಿದೆ. ಅತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.* ರಾಷ್ಟ್ರಪತಿಯಾಗಿ ತಾನು ಬಯಸುವ ಅಭ್ಯರ್ಥಿ ಆಯ್ಕೆ ಮಾಡುವ ಸ್ಥಿತಿಯಲ್ಲಿ ಬಿಜೆಪಿ ಇದೆ. ವಿವಿಧ ರಾಜ್ಯಗಳ ಅಂಕಿಅಂಶ ಆಧರಿಸಿದರೆ ಸದ್ಯ ಬಿಜೆಪಿ 1,431 ಶಾಸಕರು ಮತ್ತು ಕಾಂಗ್ರೆಸ್ 766 ಶಾಸಕರ ಬಲ ಹೊಂದಿವೆ.* ಬಿಜೆಪಿ, ಕಾಂಗ್ರೆಸ್‌ಯೇತರ ಪಕ್ಷಗಳ ಶಾಸಕರ ಬಲ 1,923 ಆಗಿದೆ. ಎನ್‌ಡಿಎ ಲೋಕಸಭೆಯಲ್ಲಿ 334, ರಾಜ್ಯಸಭೆಯಲ್ಲಿ 115 ಸದಸ್ಯರನ್ನು ಹೊಂದಿದೆ. ಬಿಜೆಪಿಯ 9 ನಾಮಕರಣ ಸದಸ್ಯರಿದ್ದು, ಅವರಿಗೆ ಮತದಾನದ ಹಕ್ಕಿಲ್ಲ. ಸಂಸದರ ಪ್ರತಿ ಮತದ ಮೌಲ್ಯವನ್ನು 708 ಎಂದು ನಿಗದಿಪಡಿಸಲಾಗಿದೆ.