Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 10 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ.* ಪ್ರಧಾನಮಂತ್ರಿ ಅವರು ನವಸಾರಿಯಲ್ಲಿ ಗುಜರಾತ್ ಗೌರವ್ ಅಭಿಯಾನ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳನ್ವಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.* ಪ್ರಧಾನಿ ಅವರು ಎ.ಎಂ. ನಾಯಕ್ ಆರೋಗ್ಯ ಸಂಕೀರ್ಣ ಮತ್ತು ನರಾಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಅಹಮದಾಬಾದ್ ನ ಬೋಪಾಲ್ ನಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ದೃಢೀಕರಣ ಕೇಂದ್ರ [ಇನ್-ಸ್ಪೇಸ್]ವನ್ನು ಉದ್ಘಾಟಿಸಲಿದ್ದಾರೆ. * “ಗುಜರಾತ್ ಗೌರವ್ ಅಭಿಯಾನ್” ಹೆಸರಿನ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ಅವರು ಪಾಲ್ಗೊಳ್ಳಲಿದ್ದು, ಅವರು ನವಸಾರಿಯ ಬುಡಕಟ್ಟು ವಲಯದ ಖುದುವೇಲ್ ನಲ್ಲಿ 3050 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. 7 ಯೋಜನೆಗಳ ಉದ್ಘಾಟನೆ, 12 ಯೋಜನೆಗಳಿಗೆ ಶಿಲಾನ್ಯಾಸ ಮತ್ತು 14 ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.* *ಯೋಜನೆಗಳು :- ಸುಮಾರು 586 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಧುಬನ್ ಅಣೆಕಟ್ಟೆ ಆಧಾರಿತ ಪ್ರಾದೇಶಿಕ ನೀರು ಸರಬರಾಜು ಯೋಜನೆ,- 163 ಕೋಟಿ ರೂಪಾಯಿ ವೆಚ್ಚದ “ನಲ್ ಸೆ ಜಲ್” ಯೋಜನೆಯನ್ನು ಉದ್ಘಾಟಿಸಲಿದ್ದಾರೆ.- ತಾಪಿ ಜಿಲ್ಲೆಯ ಜನರಿಗೆ ಸೂಕ್ತ ಪ್ರಮಾಣದಲ್ಲಿ ವಿದ್ಯುತ್ ಪೂರೈಸುವ 85 ಕೋಟಿ ರೂಪಾಯಿ ಮೊತ್ತದ ವಿರ್ಪುರ್ ವ್ಯಾರ ಜಿಲ್ಲೆಯ ವಿದ್ಯುತ್ ಉಪ ಕೇಂದ್ರ.- 20 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಿಸಿದ14 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ- 21 ಕೋಟಿ ರೂಪಾಯಿ ಮೊತ್ತದಲ್ಲಿ ನವಸಾರಿಯಲ್ಲಿ ಸರ್ಕಾರಿ ನೌಕರರಿಗೆ ವಸತಿ ಸೌಲಭ್ಯ- ಪಿಪ್ಲೈದೇವಿ – ಜುನೆರ್ – ಚಿಚ್ಚೈಹಿರ್ – ಪಿಪ್ಲಾದಾಹದ್ ನಡುವೆ ನಿರ್ಮಿಸಿರುವ ರಸ್ತೆ ಮತ್ತು ದಂಗ್ ನಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. - 549 ಕೋಟಿ ರೂಪಾಯಿ ವೆಚ್ಚದ 8 ನೀರು ಪೂರೈಕೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಇದರಿಂದ ಸೂರತ್, ನವಸಾರಿ, ವಲ್ಸದ್ ಮತ್ತು ತಾಪಿ ಜಿಲ್ಲೆಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. - ನವಸಾರಿ ಜಿಲ್ಲೆಯಲ್ಲಿ ಖೇರ್ಗಾಮ್ ಮತ್ತು ಪಿಪಲ್ಖೇಡ್ ನಡುವೆ 33 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ರಸ್ತೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನವಸಾರಿ – ಬರ್ದೋಲಿ ಮೂಲಕ ಸೂಪಗೆ ಸಂಪರ್ಕ ಕಲ್ಪಿಸುವ 27 ಕೋಟಿ ರೂಪಾಯಿ ವೆಚ್ಚದ ಮತ್ತೊಂದು ನಾಲ್ಕು ಪಥದ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. - ಪ್ರಧಾನಮಂತ್ರಿ ಅವರು 28 ಕೋಟಿ ರೂಪಾಯಿ ವೆಚ್ಚದ ಜಿಲ್ಲಾ ಪಂಚಾಯತ್ ಭವನ ನಿರ್ಮಾಣ ಮತ್ತು ಡಾಂಗ್ ನಲ್ಲಿ 10 ಕೋಟಿ ರೂಪಾಯಿ ವೆಚ್ಚದ ಅಭಿವೃದ‍್ಧಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.