Job Description: * ಸ್ಪೇನ್‍ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‍ ಸ್ಲಾಂ ಟೆನಿಸ್ ಟೂರ್ನಿಯ 22 ಗ್ರ್ಯಾನ್ ಸ್ಲಾಂನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಈ ಮೂಲಕ 22 ನೇ ಗ್ರ್ಯಾನ್ ಸ್ಲಾಂ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.* ರೋಲ್ಯಾಂಡ್ ಅವರು ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಇತ್ತೀಚಿಗೆ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ 6-3 , 6-3 , 6-0 ರ ನೇರ ಸೆಟ್‌ಗಳ ಜಯ ಸಾಧಿಸಿದರು.* ಇಲ್ಲಿ ತಮ್ಮ 14 ನೇ ಪ್ರಶಸ್ತಿ ಮುಡಿಗೇರಿಸಿಕೊಂಡಲ್ಲದೆ , “ ಕೇ ಕೋರ್ಟ್ ಕಿಂಗ್ ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.* ಜನೇವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗೆದ್ದು ದಾಖಲೆಯ 21 ನೇ ಟ್ರೋಫಿ ಜಯಿಸಿದ ನಡಾಲ್ , ಗ್ರಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22 ಕ್ಕೆ ಹೆಚ್ಚಿಸಿಕೊಂಡರು.* * ಸಾಧನೆ : -• ಫ್ರೆಂಚ್‌ಓಪನ್‌ಗೆದ್ದ ಅತಿ ಹಿರಿಯ ಆಟಗಾರ• ದಾಖಲೆಯ 22 ನೇ ಗ್ರಾನ್‌ಸ್ಲಾಂ ಕಿರೀಟ• ಫ್ರೆಂಚ್‌ ಓಪನ್‌ನಲ್ಲಿ 14 ನೇ ಪ್ರಶಸ್ತಿ ಸಂಭ್ರಮ • 17 ವರ್ಷಗಳ ಹಿಂದೆ ಇಲ್ಲಿ ಮೊದಲ ಟ್ರೋಫಿ ಜಯಿಸಿದ್ದರು• ಈ ಋತುವಿನ ಎರಡನೇ ಗ್ಯಾನ್‌ಸ್ಲಾಂ ಪ್ರಶಸ್ತಿ 2-6 , 6-3 , 6-2 ರಲ್ಲಿ ಅಮೆರಿಕ ಕೊಕೊ ಗಫ್- ಜೆಸ್ಸಿಕಾ ಪೆಗುಲ ಅವರನ್ನು ಮಣಿಸಿ ಟ್ರೋಫಿ ಜಯಿಸಿದರು.* * ನಡಾಲ್‌ಗೆದ್ದ ಗ್ರಾನ್‌ಸ್ಲಾಂ ಪ್ರಶಸ್ತಿ : -- ಆಸ್ಟ್ರೇಲಿಯನ್ ಓಪನ್ 2009 , 2022 - ಫ್ರೆಂಚ್ ಓಪನ್ 2005 , 2006 , 2007 , 2008 , 2010 , 2011 , 2012 , 2013 , 2014 , 2017 , 2018 , 2019 , 2020 , 2022- ವಿಂಬಲ್ಡನ್ 2008 , 2010 - ಯುಎಸ್ ಓಪನ್ 2010 , 2013 , 2017 , 2019