Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಮೇ 28 ರಂದು ಗುಜರಾತ್‌ಗೆ ಭೇಟಿ ನೀಡಿದರು.* ಪ್ರಧಾನಿ ಅವರು ರಾಜ್‌ಕೋಟ್‌ನ ಅಟ್ಕೋಟ್ ನಲ್ಲಿ ಹೊಸದಾಗಿ ನಿರ್ಮಿಸಿರುವ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. * ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ನಾಯಕರ 'ಸಹಕಾರದಿಂದ ಸಮೃದ್ಧಿ' ಕುರಿತು ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ. * ಮೋದಿ ಅವರು ಕಲೋಲ್‌ನ ಇಫ್ಕೋ ನಿರ್ಮಿಸಿರುವ ನ್ಯಾನೋ ಯೂರಿಯಾ (ದ್ರವ) ಸ್ಥಾವರವನ್ನು ಉದ್ಘಾಟನೆ ಮಾಡಿದರು.**ರೈತರ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಮತ್ತು ಅವರ ಆದಾಯ ವೃದ್ಧಿಗೆ ಸಹಾಯ ಮಾಡುವ ವಿಧಾನಗಳನ್ನು ಮತ್ತಷ್ಟು ಒದಗಿಸುವ ಪ್ರಯತ್ನದ ಭಾಗವಾಗಿ, ಸುಮಾರು 173 ಕೋಟಿ ರೂ.ವೆಚ್ಚದಲ್ಲಿ ಕಲೋಲ್‌ನನಲ್ಲಿ ಇಫ್ಕೋ ನಿರ್ಮಿಸಿರುದ ನ್ಯಾನೋ ಯೂರಿಯಾ (ದ್ರವ) ಘಟಕವನ್ನು ಪ್ರಧಾನಮಂತ್ರಿ ಉದ್ಘಾಟಿಸಿದ್ದಾರೆ. ನ್ಯಾನೊ ಯೂರಿಯಾ ಬಳಕೆಯಿಂದ ಬೆಳೆಗಳ ಇಳುವರಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ನ್ಯಾನೊ ರಸಗೊಬ್ಬರ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಾವರವು ದಿನಕ್ಕೆ 500 ಎಂ.ಎಲ್.ನ ಸುಮಾರು 1.5 ಲಕ್ಷ ಬಾಟಲಿಗಳನ್ನು ಉತ್ಪಾದಿಸುತ್ತದೆ.* ಪ್ರಧಾನಮಂತ್ರಿ ಭೇಟಿ ನೀಡಿದ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಶ್ರೀ ಪಟೇಲ್ ಸೇವಾ ಸಮಾಜವು ನಿರ್ವಹಣೆ ಮಾಡುತ್ತಿದೆ.* ಇದು ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳ ಲಭ್ಯವಾಗುವಂತೆ ಮಾಡುತ್ತದೆ ಮತ್ತು ಆ ಪ್ರದೇಶದ ಜನರಿಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯ ಒದಗಿಸುತ್ತದೆ. * ಆಸ್ಪತ್ರೆಯ ಭೇಟಿಯ ನಂತರ ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.