Job Description: * ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಕೊರಿಯಾದಲ್ಲಿ ನಡೆದ ವಿಶ್ವಕಪ್‌ ಮತ್ತು ಟರ್ಕಿಯಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಿಂದ ಹಿಂದಿರುಗಿದ ಭಾರತದ ಸನ್ಮಾನಿಸಿದರು.* ಕಳೆದ ಕೆಲವು ದಿನಗಳಲ್ಲಿ ಭಾರತವು ಆರ್ಚರಿ ವಿಶ್ವಕಪ್‌ನಲ್ಲಿ 5 ಮತ್ತು ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 3 ಪದಕಗಳನ್ನು ಗೆದ್ದಿದೆ. * ಪುರುಷರ ಕಾಂಪೌಂಡ್‌ ಬಿಲ್ಲುಗಾರಿಕೆಯಲ್ಲಿ 16 ಭಾರತೀಯ ಬಿಲ್ಲುಗಾರರ ತಂಡ ಒಂದು ಚಿನ್ನದ 1 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದರೆ, * ಮಹಿಳಾ ಬಾಕ್ಸರ್‌ಗಳು ವಿಶ್ವ ಚಾಂಪಿಯನಿಷಿಪ್‌ನಲ್ಲಿ ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.* ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತನ್ನ ತೂಕ ವಿಭಾಗದಲ್ಲಿ ಚಿನ್ನ ಗೆದ್ದ ಹಾಗೂ ಈ ಸಾಧನೆ ಮಾಡಿದ ಐದನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾಕ್ಸರ್‌ ನಿಖತ್‌ ಜರೀನ್‌.* ಪದಕ ವಿಜೇತ ಬಾಕ್ಸರ್‌ಗಳಾದ ಮನೀಷಾ ಮೌನ್‌ ಮತ್ತು ಪವೀರ್‍ನ್‌ ಕಂಚಿನ ಪದಕಗಳನ್ನು ಗೆದ್ದರು.* ಮುಸ್ಕಾನ್‌ ಕಿರಾರ್‌, ಅವ್ನೀತ್‌ ಕೌರ್‌, ಮಹಿಳಾ ಕಾಂಪೌಂಡ್‌ ತಂಡದ ಪ್ರಿಯಾ ಗುರ್ಜರ್‌, ಅಭಿಷೇಕ್‌ ವರ್ಮಾ, ಮಿಶ್ರ ಕಾಂಪೌಂಡ್‌ ತಂಡದ ಎ.ವಿನೀತ್‌ ಕೌರ್‌ ಮತ್ತು ಮಹಿಳಾ ರಿಕರ್ವ್‌ ತಂಡದ ರಿಧಿ, ಕೊಮೋಲಿಕಾ ಬಾರಿ ಮತ್ತು ಅಂಕಿತಾ ಭಕತ್‌ ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.