Job Description: * ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ ಒ)ಯ ಕೇಂದ್ರ ಕಚೇರಿ ಜಿನೀವಾದಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿಯ 75 ನೇ ಅಧಿವೇಶನ* 75 ನೇ ಅಧಿವೇಶನದಲ್ಲಿ ಐತಿಹಾಸಿಕ ಭಾಷಣ ಮಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಡಾ.ಮನ್ಸುಖ್ ಮಾಂಡವೀಯ, ಸ್ಥಿತಿಸ್ಥಾಪಕತ್ವ ಜಾಗತಿಕ ಆರೋಗ್ಯ ಭದ್ರತಾ ವಿನ್ಯಾಸವನ್ನು ಅಭಿವೃದ್ಧಿಪಡಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು* ಡಾ.ಮನ್ಸುಖ್ ಭಾಷಣದಲ್ಲಿ ಲಸಿಕೆಗಳು ಮತ್ತು ಔಷಧಿಗಳಿಗೆ ಸಮಾನವಾದ ಲಭ್ಯತೆಯನ್ನು ಖಾತ್ರಿಪಡಿಸಲು ಸ್ಥಿತಿಸ್ಥಾಪಕತ್ವ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅವಶ್ಯಕತೆಯಿದೆ* ತಂತ್ರಜ್ಞಾನ ವರ್ಗಾವಣೆ ಮತ್ತು ಪ್ರಾದೇಶಿಕ ಉತ್ಪಾದನಾ ಸಾಮರ್ಥ್ಯಗಳು ಸೇರಿದಂತೆ ವೈದ್ಯಕೀಯ ಪ್ರತಿತಂತ್ರಗಳಿಗೆ ಸಮಾನವಾದ ಲಭ್ಯತೆಯ ಜೊತೆಗೆ ಪ್ರಮುಖ ಕೇಂದ್ರೀಕೃತ ಕ್ಷೇತ್ರವಾಗಿ ಉಳಿಯಬೇಕು ಎಂದು ಭಾರತವು ಪ್ರಮುಖವಾಗಿ ಪ್ರಸ್ತಾಪಿಸಲು ಬಯಸುತ್ತದೆ.* ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರು, ಲಸಿಕೆ ಮತ್ತು ಔಷಧಗಳ ಸಮಾನ ಲಭ್ಯತೆಗೆ ಸ್ಥಿತಿ ಸ್ಥಾಪಕತ್ವ ಜಾಗತಿಕ ಪೂರೈಕೆ ಸರಣಿ ನಿರ್ಮಾಣ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು.* ಭಾರತದ ಸಂವಿಧಾನದ 263 ನೇ ವಿಧಿಯಡಿಯಲ್ಲಿ ರಚಿಸಿರುವ ಭಾರತದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರುಗಳ ಪ್ರಾತಿನಿಧಿಕ ಸಂಸ್ಥೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಮಂಡಳಿಯು, ಡಬ್ಲ್ಯೂಎಚ್ ಒ ವಿಧಾನದ ಬಗ್ಗೆ ಅವರ ಸಾಮೂಹಿಕ ನಿರಾಶೆ ಮತ್ತು ಕಳವಳವನ್ನು ತಿಳಿಸಲು ತನ್ನ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.