Job Description: * ಮೈಸೂರು ಲೀಡ್ ಸಂಸ್ಥಾಪಕ ಡಾ.ಆರ್. ಬಾಲ್ ಸುಬ್ರಮಣ್ಯಂ ಅವರ ನೇತೃತ್ವ್ದಲ್ಲಿ ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ವಿವಿಧ ಹಂತಗಳಲ್ಲಿ ಸಮಾಲೋಚನೆ ನಡೆಸಿ ಯುವನೀತಿ ಕರುಡನ್ನು ಇಲಾಖೆಯು ರಚಿಸಿತ್ತು.* ಯುವನೀತಿಯನ್ನು 2022-2030 ರಲ್ಲಿ ಅನುಷ್ಠಾನಕ್ಕೆ ತರಲು ಯುವ ಸಭಲೀಕರಣ ಮತ್ತು ಕ್ರಿಡಾ ಇಲಾಖೆ ಮುಂದಾಯಿತು* ಯುವ ಪೀಳಿಗೆಗೆ ಪ್ರೋತ್ಸಾಹವನ್ನು ನೀಡುವುದು ಉದ್ದೇಶವನ್ನು ಆಧರಿಸಿ ಈ ನೀತಿಯನ್ನು ರಚಿಸಲಾಯಿತು.* ಕರ್ನಾಟಕ ಯುವ ನೀತಿ-2022 ಕರುಡನ್ನು ಯುವ ಸಭಲೀಕರಣ ಮತ್ತು ಕ್ರಿಡಾ ಇಲಾಖೆ ಇತ್ತೀಚಿಗೆ ಪ್ರಕಟಿಸಿದೆ ಯವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಪುನರ್‌ರಚನೆ ಮಾಡಬೇಕು ಯುವಜನ ಸಬಲೀಕರಣ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರತ್ಯೇಕವಾದ ನಿರ್ದೇಶನಾಲಯಗಳನ್ನು ಸ್ಥಾಪಿಸಬೇಕು ಎಂಬ ಸಲಹೆಯನ್ನೂ ಕರಡು ನೀತಿಯಲ್ಲಿ ತಿಳಿಸಲಾಗಿದೆ. * ಪ್ರತ್ಯೇಕವಾದ ಯುವ ಬಜೆಟ್ ರೂಪಿಸಬೇಕೆಂಬ ಶಿಫಾರಸನ್ನೂ ಮಾಡಲಾಗಿದೆ . * ಪ್ರಮುಖ ಅಂಶಗಳು:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಸಿಕ ಆನ್‌ಲೈನ್ ಶಿಕ್ಷಣ ವಿಭಾಗ ಆರಂಭಿಸುವುದು.- ಉದ್ಯಮಶೀಲತೆ ಪ್ರೋತ್ಸಾಹಿಸಲು ರಾಜ್ಯ ಉದ್ಯಮಶೀಲತಾ ಕೇಂದ್ರ ಸ್ಥಾಪನೆ- ಯುವಜನರನ್ನು ಡಿಜಿಟಲ್ ವ್ಯಸನದಿಂದ ಮುಕ್ತಗೊಳಿಸಲು ಆಪ್ತಸಲಹೆ - ನಾಯಕತ್ವ ರೂಪಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮ.