Job Description: * ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಡಳಿತವು ಭಾರತವನ್ನು ದೀರ್ಘಾವಧಿಯ ಭದ್ರತಾ ಪಾಲುದಾರರಾಗಿ ಮಾಡಿಕೊಳ್ಳಲು ಈ ಉಪಕ್ರಮ ರೂಪಿಸಿದೆ.* ರಷ್ಯಾದ ಮೇಲಿನ ಶಸ್ತ್ರಾಸ್ತ ಅವಲಂಬನೆಯನ್ನು ಕಡಿತಗೊಳಿಸಲು ಅಮೆರಿಕವು ಭಾರತಕ್ಕಾಗಿ ಬೃಹತ್ ಮಿಲಿಟರಿ ಪ್ಯಾಕೇಜ್ ನೀಡಲು ಮುಂದಾಗುತ್ತಿದೆ.* ಫೈಟರ್ ಜೆಟ್‌ಗಳು, ನೌಕಾಪಡೆಯ ಹಡಗುಗಳು ಮತ್ತು ಯುದ್ಧ ಟ್ಯಾಂಕರ್‌ಗಳಂತಹ ಪ್ರಮುಖ ಶಸ್ತ್ರಾಸ್ತಗಳನ್ನು ಭಾರತಕ್ಕೆ ನೀಡುತ್ತಿದೆ. * ಭಾರತವು ರಷ್ಯಾದ ಮೇಲಿನ ಶಸ್ತ್ರಾಸ್ತಗಳ ಅವಲಂಬನೆಯನ್ನು ಕಡಿಮೆಗೊಳಿಸಲು ಜೊತೆಗೆ ಅಮೆರಿಕ-ಭಾರತದ ನಡುವಿನ ಮಿಲಿಟರಿ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಅಮೆರಿಕ 500 ಮಿಲಿಯನ್ ಡಾಲರ್‌ಗಳ (ಸುಮಾರು 3,800 ಕೋಟಿ ರೂ.) ಬೃಹತ್ ಮೊತ್ತದ ಪ್ಯಾಕೇಜ್ ಅನ್ನು ಸಿದ್ಧಪಡಿಸಿಕೊಂಡಿದೆ ಎಂದು ಅಮೆರಿಕ ಮೂಲಗಳು ತಿಳಿಸಿವೆ.* ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಸಂಸ್ಥೆಯ ಪ್ರಕಾರ ಕಳೆದ ದಶಕದಲ್ಲಿ ಭಾರತವು ಯುಎಸ್‌ನಿಂದ 4 ಶತಕೋಟಿ ಡಾಲರ್ (ಅಂದಾಜು 3 ಸಾವಿರ ಕೋಟಿ) ಹಾಗೂ ರಷ್ಯಾದಿಂದ 25 ಶತಕೋಟಿ ಡಾಲರ್ (ಅಂದಾಜು 19 ಸಾವಿರ ಕೋಟಿ) ಗಿಂತ ಹೆಚ್ಚಿನ ಮೌಲ್ಯದ ಮಿಲಿಟರಿ ಉಪಕರಣಗಳನ್ನು ಖರೀದಿಸಿದೆ.