Job Description: * ಕಾನ್ ಚಲನಚಿತ್ರೋತ್ಸವದ ಮಾರುಕಟ್ಟೆಯಲ್ಲಿ “ಮಾರ್ಚ್ ಡು ಫಿಲ್ಮ್ ಇಂಡಿಯಾ ಪೆವಿಲಿಯನ್ ಅನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಉದ್ಘಾಟಿಸಿದರು. * ವಿದೇಶಿ ಚಿತ್ರ ತಯಾರಕರಿಗೆ ಭಾರತವನ್ನು ಅತ್ಯಂತ ನೆಚ್ಚಿನ ತಾಣವನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಭಾರತದಲ್ಲಿ ವಿದೇಶಿ ಚಲನಚಿತ್ರಗಳು ಮತ್ತು ವಿದೇಶಿ ಸಹ ನಿರ್ಮಾಣಗಳ ಚಿತ್ರೀಕರಣವನ್ನು ಉತ್ತೇಜಿಸಲು ಎರಡು ಯೋಜನೆಗಳನ್ನು ಪ್ರಕಟಿಸಿದ್ದಾರೆ.* ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಶ್ರವ್ಯ, ದೃಶ್ಯ, ಸಹ ನಿರ್ಮಾಣಕ್ಕಾಗಿ ಪ್ರೋತ್ಸಾಹದಾಯಕ ಯೋಜನೆ ಮತ್ತು ವಿದೇಶಿ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿದರೆ ಉತ್ತೇಜನ ನೀಡುವ ಯೋಜನೆಗಳಿಂದ ಭಾರತೀಯ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.* “ಭಾರತೀಯರ ಮೌಲ್ಯಗಳು, ನಂಬಿಕೆಗಳು ಮತ್ತು ಅನುಭವಗಳು ಪ್ರತಿಬಿಂಬಿಸುತ್ತವೆ. ಭಾರತೀಯ ಸಿನೆಮಾಗಳು ವಿಶ್ವಾಸ, ಕನಸು ಮತ್ತು ಸಾಧನೆಗಳನ್ನು ಅನಾವರಣಗೊಳಿಸುತ್ತವೆ. ಭಾರತೀಯ ಚಲನಚಿತ್ರ ಕೈಗಾರಿಕೆ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಸಾರ್ವತ್ರಿಕ ಗುಣಲಕ್ಷಣಗಳನ್ನು ಕಂಡುಕೊಂಡಿದೆ. ಇದು ನಮ್ಮ ಪುರಾತನ ಕಥೆಗಳನ್ನು ರಕ್ಷಿಸುತ್ತದೆ, ತಂತ್ರಜ್ಞಾನದ ಮೂಲಕ ಭಾರತೀಯ ಚಿತ್ರ ತಯಾರಕರು ಕಥೆ ಹೇಳುವ ನಾವಿನ್ಯತೆಯನ್ನು ಅಳವಡಿಸಿಕೊಂಡಿದ್ದಾರೆ” ಎಂದು ಸಚಿವರು ಹೇಳಿದರು.