Job Description: * ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ನ ಬೆಳ್ಳಿ ಹಬ್ಬ 25 ನೇ ವರ್ಷದ ಆಚರಣೆಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು 5 ಜಿ ಟೆಸ್ಟ್ ಬೆಡ್ ಗೆ ಚಾಲನೆ ನೀಡಿದರು.* 5 ಜಿ ಟೆಸ್ಟ್ ಬೆಡ್ ಲೋಕಾರ್ಪಣೆ ಮತ್ತು ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿ ಪ್ರಧಾನಿ ಅವರು ಮಾತನಾಡಿದರು.* * ಏನಿದು 5 G ಟೆಸ್ಟ್ ಬೆಡ್ ? * 5 G ಟೆಸ್ಟ್ ಬೆಡ್ ಎಂಬುದು ಭಾರತೀಯ ಉದ್ಯಮ ಮತ್ತು ಸ್ಟಾರ್ಟಪ್‌ಗಳಿಗೆ ಬೆಂಬಲ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ, ಇದು 5 ಜಿ ಮತ್ತು ಮುಂದಿನ - ಪೀಳಿಗೆಯ ತಂತ್ರಜ್ಞಾನಗಳಲ್ಲಿ ಅವರ ಉತ್ಪನ್ನಗಳು, ಮೂಲಮಾದರಿಗಳು, ಪರಿಹಾರಗಳು ಮತ್ತು ಅಲ್ಗಾರಿದಮ್‌ಗಳನ್ನು ಮೌಲ್ಯಿಕರಿಸಲು ಸಹಾಯ ಮಾಡುತ್ತದೆ . 220 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. * * ಉದ್ದೇಶ : * 5 ಜಿ ಮಾನದಂಡವನ್ನು 5 ಜಿಐ ರೂಪದಲ್ಲಿ ಒದಗಿಸಲಾಗಿದೆ. ಇದು ದೇಶದ ಹಳ್ಳಿಗಳಿಗೆ 5 ಜಿ ತಂತ್ರಜ್ಞಾನವನ್ನು ಒದಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. * 5 ಜಿ ತಂತ್ರಜ್ಞಾನವು ದೇಶದ ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ, ಇದು ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ನಂತಹ ಪ್ರತಿಯೊಂದು ವಲಯ ದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. * ಇದು ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.