Job Description: * ಭಾರತ ದೇಶದ ಮೊದಲ 'ಅಮೃತ ಸರೋವರ' ಮಹೋತ್ಸವವು ಉತ್ತರ ಪ್ರದೇಶದ ರಾಮ್‌ಪುರ್‌ನಲ್ಲಿ ನಿರ್ಮಾಣವಾಗಿದ್ದು, ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಉದ್ಘಾಟಿಸಿದ್ದಾರೆ.* ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನೆನಪಿಗೆ ಅಮೃತ ಸರೋವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಕೊಳಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಮೋದಿ ' ಮನ್ ಕೀ ಬಾತ್'ನಲ್ಲಿ ಕರೆ ನೀಡಿದ್ದರು.* ಈ ಕುರಿತ ಹೇಳಿಕೆಯಲ್ಲಿ ನಖ್ವಿ ಅವರು, ಅಲ್ಪಾವಧಿಯಲ್ಲಿ ಈ ಸರೋವರವನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲಾಡಳಿತ ಮತ್ತು ಅಲ್ಲಿರುವ ಸ್ಥಳೀಯ ಜನರ ಸಹಭಾಗಿತ್ವ ಪ್ರಮುಖ ಪಾತ್ರವಹಿಸಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಹೇಳಿಕೆ ನೀಡಿದ್ದಾರೆ.