Job Description: * ಮಾರ್ಚ್ 2022 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸಸ್ಯಗಳ ಸುರಕ್ಷತೆ ಮತ್ತು ಸಸ್ಯಗಳ ಆರೋಗ್ಯವನ್ನು ರಕ್ಷಿಸುವ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೇ 12 ಅನ್ನು ಅಂತರರಾಷ್ಟ್ರೀಯ ಸಸ್ಯ ಆರೋಗ್ಯ ದಿನ (IDPH) ಎಂದು ಆಚರಿಸಲು ನಿರ್ದರಿಸಲಾಯಿತು.* ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ (UNGA) ನಿರ್ಣಯಕ್ಕೆ ಬೊಲಿವಿಯಾ, ಫಿನ್‌ಲ್ಯಾಂಡ್, ಪಾಕಿಸ್ತಾನ, ಫಿಲಿಪೈನ್ಸ್, ಟಾಂಜಾನಿಯಾ ಮತ್ತು ಜಾಂಬಿಯಾ ದೇಶಗಳು ಸಹ-ಸಹಿ ಹಾಕಿದವು.* ಮಾನವನ ಮತ್ತು ಸಸ್ಯಗಳ ಆರೋಗ್ಯವನ್ನು ರಕ್ಷಿಸುವುದು ಹಸಿವನ್ನು ಹೋಗಲಾಡಿಸಲು, ಬಡತನವನ್ನು ಕಡಿಮೆ ಮಾಡಲು, ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕೆಂದರೆ ಸಸ್ಯಗಳು ಆಹಾರದ 80% ಮತ್ತು ಆಮ್ಲಜನಕದ 98% ಗೆ ಕೊಡುಗೆ ನೀಡುತ್ತವೆ.* ಸಸ್ಯ ಪರಿಸರ ವ್ಯವಸ್ಥೆಗಳನ್ನು ಹವಾಮಾನ ಬದಲಾವಣೆ ಮತ್ತು ವಿನಾಶಕಾರಿ ಮಾನವ ಚಟುವಟಿಕೆಗಳು ಹಾಲು ಮಾಡುತ್ತಿವೆ. ಪ್ರತಿ ವರ್ಷ ಸುಮಾರು 40% ಆಹಾರ ಬೆಳೆಗಳು ಆಕ್ರಮಣಕಾರಿ ಕೀಟಗಳು ಮತ್ತು ರೋಗಗಳಿಂದ ನಾಶವಾಗುತ್ತವೆ.