Job Description: * 1998 ರಲ್ಲಿ ರಾಜಸ್ಥಾನದ ಭಾರತೀಯ ಸೇನೆಯ ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಪೋಖ್ರಾನ್- 2 ಪರೀಕ್ಷೆಗಳನ್ನು ನಡೆಸಿತು, ಇದು ಐದು ಪರಮಾಣು ಸ್ಫೋಟಗಳ ಸರಣಿ ಪರೀಕ್ಷೆಯಾಗಿದೆ. ಪೋಖ್ರಾನ್-2 ಪರೀಕ್ಷೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ.* ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು 1998ರಲ್ಲಿ ಪೋಕ್ರಾನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದ ಸಂದರ್ಭವನ್ನು ನೆನೆದು ವಿಜ್ಞಾನಿಗಳ ಶ್ರಮದ ಬಗ್ಗೆ ಹೊಗಳಿದ್ದಾರೆ. * 1998ರಲ್ಲಿ ಪೋಕ್ರಾನ್ ಪರೀಕ್ಷೆಯ ನಾಯಕರಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ನಡೆದಿತ್ತು.