Job Description: * ನವದೆಹಲಿಯಲ್ಲಿ ಮೇ 11 ರಂದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು "ಮೋದಿ @ 20 ಡ್ರೀಮ್ಸ್ ಮೀಟ್ ಡೆಲಿವರಿ" ಪುಸ್ತಕವನ್ನು ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ರಾಜಕೀಯ ಜೀವನ ಕುರಿತಾಗಿ ಬರೆದಿರುವ ಪುಸ್ತಕ ಇದಾಗಿದೆ.* ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬುದ್ಧಿಜೀವಿಗಳು ಮತ್ತು ತಜ್ಞರು ಬರೆದಿರುವ ತುಣುಕುಗಳ ಸಂಕಲನವಿದೆ. ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಂಬಿಕೆ ಇರುವವರಿಗೆ ಅದರಲ್ಲೂ ಸಮಾಜ ಸೇವೆಯಲ್ಲಿ ದುಡಿಯುವವರಿಗೆ ಈ ಪುಸ್ತಕವು ಗೀತೆಯಾಗಿ ಬರಲಿದೆ ಎಂದು ಅಮಿತ್ ಶಾ ತಿಳಿಸಿದರು.* ನರೇಂದ್ರ ಮೋದಿ ಅವರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದರು, ಕಳೆದ 8 ವರ್ಷಗಳಿಂದ ದೇಶದ ಪ್ರಧಾನಿಯಾಗಿದ್ದಾರೆ. 20 ವರ್ಷಗಳ ಅವರ ರಾಜಕೀಯ ಜೀವನವನ್ನು ಮತ್ತು ಅವರ ರಾಜಕೀಯದ ಮೊದಲಿನ ಜೀವನದ ಕುರಿತಾದ ಪುಸ್ತಕ ಇದಾಗಿದೆ. * ಮೋದಿ@20:ಡ್ರಿಮ್ಸ್ ಮೀಟ್ ಡೆಲಿವರಿ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಬಾಕ್ಸರ್ ಮೇರಿ ಕೋಮ್, ಲೇಖಕಿ ಸುಧಾ ಮೂರ್ತಿ, ಅಮಿತ್ ಶಾ, ಎಂ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಜನ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.* 'ಮೋದಿ@20:ಡ್ರಿಮ್ಸ್ ಮೀಟ್ ಡೆಲಿವರಿ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಬಾಕ್ಸರ್ ಮೇರಿ ಕೋಮ್ ಅವರನ್ನು ಲೇಖಕಿ ಸುಧಾ ಮೂರ್ತಿ ಆಶೀರ್ವದಿಸಿದರು.