Job Description: * T-20 ಕ್ರಿಕೆಟ್ ನಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿ ಆಡುತ್ತಿರುವ ರಶೀದ್ ಖಾನ್‌ 450 ವಿಕೆಟ್‌ಗಳನ್ನು ಪಡೆಯುದರ ಮೂಲಕ ವಿಶ್ವದ ಮೂರನೇ ಬೌಲರ್ ಸ್ಥಾನವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಟಿ 20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಬ್ರಾವೊ 585 ವಿಕೆಟ್ ಗಳನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದಾರೆ ಇಮ್ರಾನ್ ತಾಹಿರ್ 551 ವಿಕೆಟ್ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ.* ರಶೀದ್ 20 ಸೆಪ್ಟೆಂಬರ್ 1998 (ವಯಸ್ಸು 23 ವರ್ಷ), ನಂಗರ್ಹಾರ್, ಅಫ್ಘಾನಿಸ್ತಾನದಲ್ಲಿ ಜನಿಸಿದರು, ಇವರು 14 ಜೂನ್ 2018 ರಲ್ಲಿ ಪ್ರ ಪ್ರಥಮ ಭಾರಿಗೆ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.* ಗುಜರಾತ್ ಟೈಟನ್ಸ್ ಮತ್ತು ಲಖನ್ ಸೂಪರ್ ಜೈಂಟ್ಸ್ ತಂಡಗಳ ನೆಡುವೆ ಮಂಗಳವಾರ ನಡೆದ ಪಂದ್ಯದಲ್ಲಿ ರಶೀದ್ 4 ವಿಕೆಟ್ ಗಳಿಸಿದರು ಗುಜರಾತ್ ಟೈಟನ್ಸ್ ತಡವು 62 ರನ್ ಗಳಿಂದ ಜಯ ಸಾದಿಸಿ, ಪ್ಲೇ ಆಫ್ ಪ್ರವೇಶಿಸಿತು* ರಶೀದ್ ಈ ಪಂದ್ಯದ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದ್ದಾರೆ. ಅವರು 3.5 ಓವರ್‌ಗಳಲ್ಲಿ 24 ರನ್‌ಗಳಿಗೆ 4 ವಿಕೆಟ್ ಪಡೆದರು.* ಐಪಿಎಲ್‌ನಲ್ಲಿ 100 ವಿಕೆಟ್‌ ಪಡೆದ ಅತಿ ಕಿರಿಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಶೀದ್, ಈಗ ವಿಶ್ವದ ಮೂರನೇ ಬೌಲರ್ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.