Job Description: * ಖ್ಯಾತ ಭಾರತೀಯ ಸಂಗೀತ ಸಂಯೋಜಕ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಇತ್ತೀಚಿಗೆ ಮುಂಬೈನಲ್ಲಿ ನಿಧನರಾದರು. ಇವರಿಗೆ 84 ವರ್ಷ ವಯಸ್ಸಾಗಿತ್ತು.* ಭಾರತದಲ್ಲಿ ಮಾತ್ರವಲ್ಲದೆ, ದೇಶ ವಿದೇಶಗಳಲ್ಲಿ ಸಂತೂರ್ ಸಂಗೀತ ವಾದನವನ್ನು ಬಹಳ ಜನಪ್ರಿಯಗೊಳಿಸಿದ್ದ ಸಂಗೀತ ಲೋಕದ ದಿಗ್ಗದ ಪಂಡಿತ್ ಶಿವಕುಮಾರ್ ಶರ್ಮಾ ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಶರ್ಮಾ ಕಳೆದ ಆರು ತಿಂಗಳಿನಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಡಯಾಲಿಸಿಸ್ ಗೆ ಒಳಗಾಗಿದ್ದರು.* 13ನೇ ವಯಸ್ಸಿನಲ್ಲಿ ಸಂತೂರ್ ವಾದನ ಕಲಿಕೆ ಆರಂಭಿಸಿದ್ದ ಶರ್ಮಾ, ಭಾರತದಲ್ಲಿ ಸಂತೂರ್ ವಾದನವನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರದು. ಅನೇಕ ಹಿಂದಿ ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿದ್ದರು.* ಜಮ್ಮುವಿನಲ್ಲಿ 1938ರಲ್ಲಿ ಜನಿಸಿದ ಪಂಡಿತ್ ಶಿವಕುಮಾರ್ ಶರ್ಮಾ ಅವರು 13ನೇ ವಯಸ್ಸಿನಲ್ಲಿ ಸಂತೂರ್ ಕಲಿಕೆ ಆರಂಭಿಸಿದ್ದರು. 1955ರಲ್ಲಿ ಮುಂಬಯಿಯಲ್ಲಿ ತಮ್ಮ ಮೊದಲ ಸಾರ್ವಜನಿಕ ಸಂಗೀತ ಪ್ರದರ್ಶನ ನೀಡಿದ್ದರು. ಸಂತೂರ್ ವಾದನವನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. * ಜಮ್ಮು ಮತ್ತು ಕಾಶ್ಮೀರದಲ್ಲಿ ಜನಪ್ರಿಯವಾಗಿ ಜನಪದ ಸಂಗೀತ ಸಾಧನವನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಬಳಸಿದ ಮೊದಲ ಸಂಗೀತಗಾರ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಅವರು ಪದ್ಮವಿಭೂಷಣ ಪುರಸ್ಕೃತರಾಗಿದ್ದಾರೆ. * 1956ರಲ್ಲಿ ಅವರು ಜನಕ್ ಪಾಯಲ್ ಬಾಜೆ ಚಿತ್ರದ ಒಂದು ಸನ್ನಿವೇಶಕ್ಕೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ್ದರು. ನಾಲ್ಕು ವರ್ಷಗಳ ಬಳಿಕ ತಮ್ಮ ಮೊದಲ ಏಕ ವ್ಯಕ್ತಿ ಆಲ್ಬಂ ಹೊರತಂದರು. ಖ್ಯಾತ ಕೊಳಲುವಾದಕ ಹರಿಪ್ರಸಾದ್ ಚೌರಾಸಿಯಾ ಮತ್ತು ಗಿರಾಟ್ ವಾದಕ ಬ್ರಿಜ್ ಭೂಷಣ್ ಕಬ್ರಾ ಅವರ ಜತೆಗೂಡಿ 1967ರಲ್ಲಿ ಬಹಳ ಪ್ರಸಿದ್ಧ 'ಕಾಲ್ ಆಫ್ ದಿ ವ್ಯಾಲಿ' ಆಲ್ಬಂ ಸಿದ್ಧಪಡಿಸಿದ್ದರು. ಹರಿಪ್ರಸಾದ್ ಚೌರಾಸಿಯಾ ಅವರ ಜತೆಗೂಡಿ ಶರ್ಮಾ ಅವರು ಸಿಲ್ಸಿಲಾ, ಚಾಂದಿನಿ, ದರ್ ಮುಂತಾದ ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದರು.