Job Description: * ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ, ಸನಾ ಇರ್ಷಾದ್, ಅಮಿತ್ ದವೆ, ಅದ್ನಾನ್ ಅಬಿದಿ ನಾಲ್ವರು ಭಾರತೀಯರಿಗೆ 9ನೇ ಮೇ 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ದೊರೆತಿದೆ.* 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರ್ಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ವೇಳೆ ಸಾವಿಗೀಡಾಗಿದ್ದ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ಪುಲಿಟ್ಜರ್ ಪ್ರಶಸ್ತಿ 2 ಭಾರಿ ಪಡೆದಿದ್ದಾರೆ.* ಇವರು 2018 ರಲ್ಲಿ ಫೀಚರ್ ಫೋಟೋಗ್ರಾಫಿಯಲ್ಲಿ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ತಮ್ಮದಾಗಿಡಿಕೊಂಡಿದ್ದರು.* ಅಫ್ಘಾನಿಸ್ತಾನದ ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಆಫ್ಘನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಸ್ಥಿತಿಗತಿಯ ವರದಿ ಮಾಡುವಾಗ 2021ರಲ್ಲಿ ಹತ್ಯೆಗೀಡಾಗಿದ್ದರು.* ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋ ಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ.ಪುಲಿಟ್ಜರ್ ಪ್ರಶಸ್ತಿ : ವಿವರಣಾತ್ಮಕ ವರದಿಗಾರಿಕೆ, ಸ್ಥಳೀಯ ವರದಿಗಾರಿಕೆ, ರಾಷ್ಟ್ರೀಯ ವರದಿಗಾರಿಕೆ, ಅಂತರರಾಷ್ಟ್ರೀಯ ವರದಿಗಾರಿಕೆ, ವಿಶೇಷ ಬರಹ, ಕಾಮೆಂಟರಿ, ಸಂಪಾದಕೀಯ ಬರಹ, ಧ್ವನಿ ವರದಿಗಾರಿಕೆ ಮೊದಲಾದ ಪತ್ರಿಕೋದ್ಯಮ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಗಳನ್ನು ಕೊಡಲಾಗಿದೆ.