Job Description: * ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು (I&B) ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (NFHM) ಮರುಸ್ಥಾಪನೆ ಯೋಜನೆಯು ಪುಣೆಯ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (NFAI) ದಲ್ಲಿ ಬರಲಿದೆ. ಈ ಯೋಜನೆಯ ಚಾಲನೆಗೆ 363 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.* ಮರುಸ್ಥಾಪನೆಗಾಗಿ ಅಪರ್ಣಾ ಸೇನ್, ಶ್ರೀರಾಮ್ ರಾಘವನ್, ಅಂಜಲಿ ಮೆನನ್ ಮತ್ತು ವೆಟ್ರಿಮಾರನ್ ಅವರನ್ನು ಒಳಗೊಂಡಿರುವ ಸಮಿತಿಯನ್ನು ಮಾಡಿದೆ.* ಮರುಸ್ಥಾಪನೆಯಲ್ಲಿ ಹೆಚ್ಚಿನ ತಂತ್ರಜ್ಞಾವನ್ನು ಬಳಸಿ ಪುನರ್ ನಿರ್ಮಾಣ ಮಾಡಲಾಗಿದೆ. ಮರುಸ್ಥಾಪನೆಯ ನಂತರ, ಎಲ್ಲಾ ಚಲನಚಿತ್ರಗಳನ್ನು ಡಿಜಿಟಲ್ ಆಗಿ ಉತ್ತಮವಾಗಿ ಸಂರಕ್ಷಿಸಲಾಗಿದೆ.* ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (NFHM) ಅನ್ನು ಭಾರತದ ಚಲನಚಿತ್ರ ಪರಂಪರೆಯನ್ನು ಮರುಸ್ಥಾಪಿಸಲು ಮತ್ತು ಸಂರಕ್ಷಿಸಲು 2014 ರಲ್ಲಿ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯವು ಅನುಮೋದಿಸಿದೆ. ಇದಕ್ಕೆ 597 ಕೋಟಿ ರೂಪಾಯಿ ಬಜೆಟ್‌ ಮೀಸಲಿಡಲಾಗಿತ್ತು.* ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (NFHM) ಇದು ವಿಶ್ವದ ಅತಿದೊಡ್ಡ ಚಲನಚಿತ್ರ ಸಂರಕ್ಷಣೆ ಕಾರ್ಯಾಚರಣೆಯಾಗಿದೆ.* ಈ ಮಿಷನ್ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (NFAI) ಮತ್ತು ಇತರ ಮಾಧ್ಯಮ ಘಟಕಗಳೊಂದಿಗೆ ಲಭ್ಯವಿರುವ ಚಲನಚಿತ್ರಗಳ ಡಿಜಿಟಲೀಕರಣ/ಮರುಸ್ಥಾಪನೆಯನ್ನು ವಹಿಸಿಕೊಂಡಿದೆ.