Job Description: * ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಹಾಕಿ ವಿಭಾಗದಲ್ಲಿ ಬೆಂಗಳೂರು ನಗರ ವಿವಿ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಇತ್ತೀಚಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಜರುಗಿದ ಪಂದ್ಯದಲ್ಲಿ ಬೆಂಗಳೂರು ವಿವಿಯು, ಪಂಜಾಬ್‍ನ ಗುರುನಾನಕ್ ದೇವ್ ವಿವಿಯನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದೆ. * ಈ ಮೂಲಕ ಬೆಂಗಳೂರು ನಗರ ವಿವಿ ಸತತವಾಗಿ 2 ನೇ ಬಾರಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದೆ. * ಬೆಂಗಳೂರು ನಗರ ವಿವಿ ಹಾಗೂ ಪಂಜಾಬ್‍ನ ಗುರುನಾನಕ್ ದೇವ್ ವಿವಿಯ ನಡುವಿನ ಫೈನಲ್ ಹಂತದಲ್ಲಿ ಹರೀಶ್ ಮುತಗಾರ್ ಮತ್ತು ವಸಂತಕುಮಾರ್ ಗೋಕಾವಿ ಅವರು ಬೆಂಗಳೂರು ಪರವಾಗಿ ಚೆಂಡನ್ನು ಗುರಿ ಮುಟ್ಟಿಸುವ ಮೂಲಕ ಜಯದ ನಗುವನ್ನು ಚಲ್ಲಿದ್ದಾರೆ. * 3 ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ ತಂಡವು ಪಂಜಾಬಿ ವಿವಿಯನ್ನು ಶೂಟೌಟ್‍ನಲ್ಲಿ 4-2 ರಲ್ಲಿ ಸೋಲಿಸುವ ಮೂಲಕ 3 ನೇ ಸ್ಥಾನ ಪಡೆದುಕೊಂಡಿದೆ. * ಮಂಗಳೂರು ವಿವಿಯ ಪರಮ್‍ಜೀತ್ ಬಿಷ್ಠ್ ಅವರು ಪುರುಷರ 20 ಕಿ.ಮೀ. ವೇಗ ನಡಿಗೆಯಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಆದರೆ ಪಂಜಾಬಿ ವಿವಿಯ ಅಕ್ಷದೀಪ್ ಸಿಂಗ್ ಅವರು ಈ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.