Job Description: * ಇದೀಗ ಭಾರತವು ಅಕ್ಟೋಬರ್ 2021 ರಿಂದ 2 ನೇ ಪ್ರಮುಖ ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿದೆ. * ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯೇ ಕಲ್ಲಿದ್ದಲು ಕೊರತೆಗೆ ಪ್ರಮುಖ ಕಾರಣವಾಗಿದೆ. 2022 ರಲ್ಲಿ ಬೇಡಿಕೆಯು ತಿಂಗಳಿಗೆ 132 ಬಿಲಿಯನ್ ಯುನಿಟ್‌ಗಳಿಗೆ ಹೆಚ್ಚಾಗಿದೆ. 2019 ರಲ್ಲಿ ತಿಂಗಳಿಗೆ 106.6 ಬಿಲಿಯನ್ ಯುನಿಟ್‌ ಇತ್ತು. ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ಜಾಗತಿಕ ಇಂಧನ ಕೊರತೆಯಿಂದಾಗಿ ಜಾಗತಿಕ ಕಲ್ಲಿದ್ದಲು ಬೆಲೆ ಏರಿಕೆಯಾಗಿದೆ. * ಇದೀಗ ಭಾರತೀಯ ರೈಲ್ವೇಯಿಂದ ದಿನಕ್ಕೆ ಬದ್ಧವಾಗಿರುವ ರೈಲುಗಳ ಸಂಖ್ಯೆ 415 ಆಗಿದೆ, ಹಾಗೂ ವಿದ್ಯುತ್ ಉಪಯುಕ್ತತೆಗಳಿಗೆ ಅಗತ್ಯವಿರುವ 453 ಕ್ಕಿಂತ 8.4% ಕಡಿಮೆಯಾಗಿದೆ ಎಂದು ವರದಿಯಾಗಿದೆ. * ಪ್ರಸ್ತುತ ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಅಭೂತಪೂರ್ವ ಶಾಖದ ಅಲೆಯಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ, ಇದರಿಂದಾಗಿ ವಿದ್ಯುತ್ ಬೇಡಿಕೆಯು ಹೆಚ್ಚಾಗಿದೆ. * ಇದೀಗ ಭಾರತದ 70% ರಷ್ಟು ವಿದ್ಯುತ್ ಬೇಡಿಕೆಯನ್ನು ಒದಗಿಸುವ ಭಾರತದಲ್ಲಿನ 100 ಕ್ಕೂ ಅಧಿಕ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ, ಕಲ್ಲಿದ್ದಲು ದಾಸ್ತಾನುಗಳು ಅಗತ್ಯವಿರುವ ಸ್ಟಾಕ್‌ನ 25% ಕ್ಕಿಂತ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಇದರಂತೆಯೇ 50 ಕ್ಕೂ ಅಧಿಕ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಶೇ.10 ಕ್ಕಿಂತ ಕಡಿಮೆಯಾಗಿದೆ. * ಕಲ್ಲಿದ್ದಲಿನ ಕೊರತೆಯಿಂದಾಗಿ ದೇಶದಲ್ಲಿ ವಿದ್ಯುತ್ ಪೂರೈಕೆಯು ಇದೇ ಏಪ್ರಿಲ್‌ನ ಮೊದಲ 27 ದಿನಗಳಲ್ಲಿ 1.88 ಶತಕೋಟಿ ಯೂನಿಟ್‌ ರಷ್ಟು ಬೇಡಿಕೆಗಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಇದೇ ಏಪ್ರಿಲ್'ನಿಂದ ಜಾರ್ಖಂಡ್ 10-12% ಪೂರೈಕೆ ಕೊರತೆಯನ್ನು ಅನುಭವಿಸುತ್ತಿದೆ. ಇದರ ನಂತರ ಆಂಧ್ರಪ್ರದೇಶ ರಾಜ್ಯವು ಕಿಯಾ ಮೋಟಾರ್ಸ್‌ನಂತಹ ವಾಹನ ತಯಾರಕರು ಹಾಗೂ ಫಿಜರ್‌ನಂತಹ ಔಷಧ ತಯಾರಕರು ನಿರ್ವಹಿಸುವ ಸ್ಥಾವರಗಳಿಗೆ ನೆಲೆಯಾಗಿದೆ, ಈ ರಾಜ್ಯದಲ್ಲಿ ಶೇ. 8.7% ನಷ್ಟು ವಿದ್ಯುತ್ ಕೊರತೆಯನ್ನು ಉಂಟಾಗಿದೆ ಎಂದು ವರದಿಯಾಗಿದೆ. * ಪ್ರಸ್ತುತ ವಿದ್ಯುತ್ ಕಡಿತವನ್ನು ಅನುಭವಿಸುತ್ತಿರುವ ರಾಜ್ಯಗಳು: ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳು. * ಇದೀಗ ಭಾರತದ 70% ಬೇಸ್‌ಲೋಡ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಪೂರೈಕೆ ಮಾಡಲಾಗುತಿತ್ತು. * ಇದೀಗ ಭಾರತದಾದ್ಯಂತ ಕಲ್ಲಿದ್ದಲು ರೇಕ್‌ಗಳ ವಿತರಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ 42 ಪ್ಯಾಸೆಂಜರ್ ರೈಲುಗಳನ್ನು ಸೇರಿ 753 ಟ್ರಿಪ್‌ಗಳನ್ನು ರದ್ದುಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎನ್ನಲಾಗಿದೆ.