Job Description: * ಇತ್ತೀಚಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುವ '16' ಯೂಟ್ಯೂಬ್ ಚಾನೆಲ್‌'ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದಾರೆ. * ಈ ಯೂಟ್ಯೂಬ್ ಚಾನೆಲ್‌ ಗಳು ಭಾರತದಲ್ಲಿ ಅಭದ್ರತೆಯ ಭೀತಿಯನ್ನ ಸೃಷ್ಟಿಸಲು, ಕೋಮು ಸಾಮರಸ್ಯವನ್ನ ಪ್ರಚೋದಿಸಲು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಲು ಸುಳ್ಳು ಸುದ್ದಿಯನ್ನು ಹರಡುತ್ತಿರುವ ಹಿನ್ನಲೆಯಿಂದಾಗಿ ಈ ಚಾನಲ್'ಗಳನ್ನೂ ನಿರ್ಬಂಧಿಸಿದೆ. * ಭಾರತದ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ನಾವು ಭವಿಷ್ಯದಲ್ಲಿಯೂ ಈ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲಾಗುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಹೇಳಿಕೆ ನೀಡಿದ್ದಾರೆ.