Job Description: * ಇದೀಗ ಭಾರತದಲ್ಲಿ ಮತ್ತೊಮ್ಮೆ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ, ಈ ಹಿನ್ನಲೆಯಿಂದಾಗಿ ಭಾರತದಲ್ಲಿನ ಔಷಧ ನಿಯಂತ್ರಕ ಮಹಾನಿರ್ದೇಶಕರು 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‍ನ ಕೋವಾಕ್ಸಿನ್‍ಗೆ ಲಸಿಕೆಯನ್ನು ನೀಡಲು ಅನುಮೋದಿಸಿದೆ. * 2021 ರ ಡಿಸೆಂಬರ್ ನಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಕೋವಾಕ್ಸಿನ್ ನೀಡಲು ಕೇಂದ್ರ ಸರ್ಕಾರವು ಅನುಮೋದನೆಯನ್ನು ನೀಡಿತ್ತು. ಇದೀಗ ಮತ್ತೇ 6ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಅನುಮತಿಯನ್ನು ನೀಡಿದೆ. * ಇದೇ ಏಪ್ರಿಲ್. 21 ರಂದು 2-12 ವರ್ಷ ವಯಸ್ಸಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ನೀಡಲು ಬಯಸಿದ್ದ ಭಾರತ್ ಬಯೋಟೆಕ್ ಸಂಸ್ಥೆಯಿಂದ ಹೆಚ್ಚುವರಿ ಮಾಹಿತಿ ನೀಡುವಂತೆ ಹೇಳಿಕೆ ನೀಡಿತ್ತು. ಅದೇ ಸಂಧರ್ಭದಲ್ಲಿ 05 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಜೈವಿಕ ಇ ಕೋವಿಡ್-19 ಲಸಿಕೆ ಕಾರ್ಬೆವಾಕ್ಸ್‍ಗೆ ತುರ್ತು ಬಳಕೆಯ ಅಧಿಕಾರ ನೀಡಲು ಸಮಿತಿಯು ಶಿಫಾರಸ್ತು ಮಾಡಿದೆ ಎಂದು ಔಷಧ ನಿಯಂತ್ರಕ ಮಹಾನಿರ್ದೇಶಕರ ವಿಷಯ ತಜ್ಞರ ಸಮಿತಿಯು ತಿಳಿಸಿದೆ.