Job Description: * ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (CHRI) ಮತ್ತು ಅಪ್ನೆ ಆಪ್ ವುಮೆನ್ ವರ್ಲ್ಡ್‌ವೈಡ್ ಇಂಡಿಯಾ (AAWWI) ನ ಎನ್‌ಜಿಒಗಳ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯ ಪರವಾನಗಿಗಳನ್ನು ಕೇಂದ್ರವು ರದ್ದುಗೊಳಿಸಲಾಗಿದೆ ಹಾಗೂ ಈ ಕಾಯ್ದೆಯಲ್ಲಿನ ವಿವಿಧ ಉಲ್ಲಂಘನೆಗಳನ್ನು ವರದಿ ಮಾಡಲಾಗಿದೆ. * ಕೇಂದ್ರ ಸರ್ಕಾರವು ಕಳೆದ ವರ್ಷದಿಂದಲೇ ಸಿಎಚ್‌ಆರ್‌ಐ ಪರವಾನಗಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. * ಇದೀಗ NGO ವಿದೇಶಿ ನಿಧಿಯನ್ನು ಪಡೆಯುವದನ್ನು ಮುಂದುವರಿಸಲು ಅವಕಾಶವನ್ನು ನೀಡಲಾಗುವದಿಲ್ಲ ಎಂದು ಸಚಿವಾಲಯವು ಹೇಳಿಕೆ ನೀಡಿದೆ. * ಕಳೆದ ವರ್ಷದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಸಿಎಚ್‌ಆರ್‌ಐ ಪರವಾನಗಿಯನ್ನು 180 ದಿನಗಳವರೆಗೆ ಅಮಾನತುಗೊಳಿಸಿತ್ತು. ಆದರೆ ತನ್ನ ಅಮಾನತು ಆದೇಶದಲ್ಲಿ ಸಚಿವಾಲಯವು CHRI 2016 ರ ಫೆಬ್ರವರಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಿಕೆ ನೀಡಿದೆ. ಇದರಂತೆಯೇ CHRI ಎಫ್‌ಸಿಆರ್‌ಎ, 2010 ರ ಇತರ ಉಲ್ಲಂಘನೆಗಳ ಬಗ್ಗೆ ಆರೋಪವನ್ನು ಮಾಡಿದೆ. ತನ್ನ ವಾರ್ಷಿಕ ವರದಿಯಲ್ಲಿ ವಿದೇಶಿ ಕೊಡುಗೆಯನ್ನು ಸ್ವೀಕರಿಸಿರುವ ಯೋಜನೆಗಳ ಬಗ್ಗೆ ವರದಿಯನ್ನು ನೀಡದಿರುವುದು ಅಲ್ಲದೇ 2013-2014 ಹಾಗೂ 2014-2015 ರಲ್ಲಿ ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿ ಹಲವು ವಿದೇಶಿ ಕೊಡುಗೆಗಳನ್ನು ಮರುಪಾವತಿ ಮಾಡುವುದನ್ನು ಒಳಗೊಂಡಿತ್ತು ಎನ್ನಲಾಗಿದೆ. * ಈ ಹಿಂದೆ CHRI ಸಚಿವಾಲಯದ ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು. CHRI ತನ್ನ 40 ಸಿಬ್ಬಂದಿ ಹಾಗೂ ಸಲಹೆಗಾರರಿಗೆ ಸಂಬಳ ನೀಡುವ ಸ್ಥಿತಿಯಲ್ಲಿಲ್ಲ ಎಂದು ಮನವಿಯನ್ನು ಮಾಡಿಕೊಂಡಿತ್ತು.