Job Description: * ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು US ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಟೆಸ್ಲಾ ಇಂಕ್‌'ಗೆ ಸ್ವಾಗತ ಕೋರಿದ್ದಾರೆ. ಆದರೆ ಚೀನಾದೇಶದಿಂದ ಆಮದು ಮಾಡಿಕೊಳ್ಳಬಾರದು ಎಂಬ ಷರತ್ತು ಹೇರಿದ್ದಾರೆ. * ಇದೀಗ ಭಾರತದಲ್ಲಿ ಟೆಸ್ಲಾ ಇಂಕ್ ಭಾರತದಲ್ಲಿ ಮಳಿಗೆ ಸ್ಥಾಪಿಸಲು ಸಹಮತವನ್ನು ನೀಡಲಾಗಿದೆ, ಇದರ ಜೊತೆಗೆ ಕಾರುಗಳನ್ನು ಮಾರಾಟ ಮಾಡಲು ಹಾಗೂ ರಫ್ತು ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಚೀನಾದಿಂದ ಯಾವುದೇ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿಕೆ ನೀಡಿದ್ದಾರೆ. * ಪ್ರಸ್ತುತ ಟೆಸ್ಲಾ ಮುಖ್ಯಸ್ಥ, ವಿಶ್ವದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ಟಿಟ್ಟರ್ ನ್ನು ಖರೀದಿ ಮಾಡಿರುವ ಹಿನ್ನಲೆಯಿಂದಾಗಿ ಭಾರತದ ಕೇಂದ್ರ ಸಚಿವರು ಈ ರೀತಿ ಹೇಳಿಕೆಯನ್ನು ನೀಡಿದ್ದಾರೆ. * ಅಮೆರಿಕದಲ್ಲಿ ಟೆಸ್ಲಾದ ಮಾಡೆಲ್ 3 ಕಾರಿನ ಬೆಲೆ 30 ಲಕ್ಷ ರೂಪಾಯಿ ಭಾರತದಲ್ಲಿನ ಈ ಕಾರಿನ ಬೆಲೆ ತೆರಿಗೆ ಹಿನ್ನಲೆಯಿಂದಾಗಿ ಸರಿಸುಮಾರು 60 ಲಕ್ಷ ರೂಪಾಯಿಯಾಗಲಿದೆ. ಕಾರಣ ಆಮದು ಸುಂಕ ಹಾಗೂ ಇನ್ನಿತರ ತೆರಿಗೆ(TAX) ಶೇ. 100. ರಷ್ಟಿದೆ ಆದರೆ ಕೈಗೆಟುಕುವ ದರದ ಟೆಸ್ಲಾ ಕಾರು ಭಾರತದಲ್ಲಿ ಹೆಚ್ಚು ದುಬಾರಿಯಾಗಲಿದೆ. ಈ ಹಿನ್ನಲೆಯಿಂದಾಗಿ ತೆರಿಗೆ ಕಡಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. * ಇದೀಗ ವಿದೇಶಿ ಕಂಪನಿಗಳು ಭಾರತದ ತೆರಿಗೆ ನೀತಿ ಮೂಲಕ ವ್ಯವಹಾರ ನಡೆಸುತ್ತಿದೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಆದರೆ ಬಿಡಿ ಭಾಗಗಳ ಆಮದು ಮಾಡಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ನೀತಿಯನ್ನು ಒಪ್ಪಿಕೊಂಡಿದೆ. ಈ ಹಿನ್ನಲೆಯಿಂದಾಗಿ ಅನೇಕ ಕಂಪನಿಗಳಿಗೆ ನೀಡದ ವಿನಾಯಿತಿಯನ್ನು ಕೇವಲ ಟೆಸ್ಲಾಗೆ ನೀಡಲು ಸಾಧ್ಯವಿಲ್ಲ ಎಂದು ವಿವೇಕ್ ಜೋಹ್ರಿ ಅವರು ಹೇಳಿಕೆ ನೀಡಿದ್ದಾರೆ.