Job Description: * ಭಾರತ ಹಾಗೂ ಯುರೋಪಿಯನ್ ಒಕ್ಕೂಟಗಳು(EU) ಜೊತೆಗೆ ಸಹಕಾರವನ್ನು ವೃದಿಸಲು ವ್ಯಾಪಾರ ಹಾಗೂ ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಒಪ್ಪಿಗೆಯನ್ನು ನೀಡಿದೆ. * ಇತ್ತೀಚಿಗೆ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಎರಡು ದಿನಗಳ ಭಾರತದ ಪ್ರವಾಸದಲ್ಲಿ ನವದೆಹಲಿಯಲ್ಲಿ EU ಮುಖ್ಯಸ್ಥರು ಹಾಗೂ ಸರ್ಕಾರದ ಅಧಿಕಾರಿಗಳ ಭೇಟಿ ಬಳಿಕ ಬಿಡುಗಡೆ ಮಾಡಲಾಗಿರುವ ಜಂಟಿ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆ ಮಾಡುವ ದೇಶ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ನಿಟ್ಟಿನಲ್ಲಿ ಭಾರತವನ್ನು ಉತ್ತೇಜಿಸಲಾಗುತ್ತದೆ ಎಂದಿದ್ದಾರೆ. * ಭಾರತವು ಉಕ್ರೇನ್‌ನ ಮೇಲಿನ ರಷ್ಯಾದ ಆಕ್ರಮಣವನ್ನು ಸ್ಪಷ್ಟವಾಗಿ ಖಂಡಿಸುವ ವಿಚಾರವಾಗಿ ದೂರ ಉಳಿದು ಕೊಂಡಿತ್ತು. ಇದೀಗ ಭಾರತದ ಜೊತೆಗೆ ಯುರೋಪಿಯನ್ ಒಕ್ಕೂಟವು ತಾಂತ್ರಿಕ ಒಪ್ಪಂದವನ್ನು ಹೊಂದಿರುವ ಮತ್ತೊಂದು ದೇಶ ಅಮೆರಿಕವಾಗಿದೆ. * ವ್ಯಾಪಾರ ಹಾಗೂ ತಂತ್ರಜ್ಞಾನ ಮಂಡಳಿಯು ರಾಜಕೀಯ ನಿರ್ಧಾರಗಳನ್ನು ಸಾಕಾರಗೊಳಿಸಲು, ತಾಂತ್ರಿಕ ಕಾರ್ಯಗಳ ಸಮನ್ವಯ ಹಾಗೂ ಯುರೋಪಿಯನ್ ಒಕ್ಕೂಟ ಹಾಗೂ ಭಾರತದ ಸುಸ್ಥಿರ ಪ್ರಗತಿಗೆ ಪ್ರಮುಖ ಕ್ಷೇತ್ರಗಳಲ್ಲಿ ಅನುಷ್ಠಾನವನ್ನು ಗೊತ್ತು ಪಡಿಸುವ ವೇದಿಕೆಯನ್ನು ಕಲ್ಪಿಸಲಿದೆ ಎಂದಿದ್ದಾರೆ. * ಇತ್ತೀಚಿಗೆ ಬ್ರಿಟನ್ ಪ್ರಧಾನಿ ಬೋರಿಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ರಕ್ಷಣೆ ಹಾಗೂ ವ್ಯಾಪಾರದ ಸಹಕಾರವನ್ನು ವೃದಿಸಲು ಒಪ್ಪಿಕೊಂಡಿದ್ದಾರೆ, ಇದಾದ ನಂತರ ಇದೀಗ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ವಾನ್ ಡೆರ್ ಲೇಯೆನ್ ಅವರು ಭಾರತಕ್ಕೆ ಭೇಟಿ ನೀಡಿ ಈ ಎಲ್ಲ ಕಾರ್ಯಗಳ ಬಗ್ಗೆ ಮಾತನಾಡಿದ್ದಾರೆ. * ಭಾರತ ಹಾಗೂ ಯರೋಪಿಯನ್ ಪಾಲುದಾರಿಕೆಯನ್ನು ಹೆಚ್ಚಿಸಲಾಗುತ್ತದೆ ಎಂದು ಜೈಶಂಕರ್ ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.