Job Description: * ಇತ್ತೀಚಿಗೆ US ಸ್ಟೇಟ್ ಸೆಕ್ರೆಟರಿ ಆಂಟೋನಿ ಜೆ. ಬ್ಲಿಂಕೆನ್ ಹಾಗೂ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ. ಆಸ್ಟಿನ್ III ಅವರು ಉಕ್ರೇನಿನ ಕಿವ್ ನಲ್ಲಿ US ರಾಯಭಾರ ಕಚೇರಿಯನ್ನು ಪುನಃ ಆರಂಭಿಸುವದಾಗಿ ಘೋಷಣೆ ಮಾಡಿದ್ದಾರೆ ಹಾಗೂ ಅವರು ಉಕ್ರೇನ್‌ಗೆ ತಮ್ಮ ಬೆಂಬಲವನ್ನು ಸೂಚಿಸಲು ಯುದ್ಧ ಪೀಡಿತ ದೇಶಕ್ಕೆ ಹೊಸ ಮಿಲಿಟರಿ ನೆರವು ನೀಡಿದ್ದಾರೆ. * ಉಕ್ರೇನ್'ನ್ನು ಹೆಚ್ಚು ಆಧುನಿಕ ಶಸ್ತ್ರಾಸ್ತ್ರಗಳುಹಾಗೂ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಸಿದ್ಧಗೊಳಿಸಲು US ಅಧ್ಯಕ್ಷರು ಉಕ್ರೇನ್ ಹಾಗೂ ಪೂರ್ವ ಯುರೋಪಿನ 15 ಇತರ ರಾಷ್ಟ್ರಗಳಿಗಾಗಿ USD 713 ಮಿಲಿಯನ್ ಹೊಸ ಮಿಲಿಟರಿ ಹಣಕಾಸುನ್ನು ನೀಡುವ ನಿರೀಕ್ಷೆಯಿದೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿ ಹೇಳಿದ್ದಾರೆ. ಈ ಹಿಂದೆ ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ, ಆಗಿನಿಂದಲೂ ಉಕ್ರೇನಿಗೆ ನೆರವಿನ ಸಹಾಯವಾಗಿ USD 3.7 ಶತಕೋಟಿಯನ್ನು ನೀಡಿದೆ ಎನ್ನಲಾಗಿದೆ. * ಈ ನೆರವು ಸೋವಿಯತ್-ವಿನ್ಯಾಸಗೊಳಿಸಿದ ರಾಕೆಟ್‌ಗಳು, ಅಸಾಲ್ಟ್ ರೈಫಲ್‌ಗಳು ಹಾಗೂ ಉಕ್ರೇನಿಯನ್ ಸೈನ್ಯವು ಬಳಕೆ ಮಾಡುತ್ತಿರುವ ಮೆಷಿನ್ ಗನ್‌ಗಳಂತಹ ಶಸ್ತ್ರಾಸ್ತ್ರಗಳ ನಿಧಿಗೆ ಹೋಗಲಿದೆ ಎಂದು ಇತ್ತೀಚಿಗೆ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ಮಾಹಿತಿ ನೀಡಿದೆ.