Job Description: * ಇತ್ತೀಚಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸರ್ಕಾರಿ ದಂತ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ನೂತನ ಲೇಸರ್‌ ಸಂಶೋಧನಾ ಕೇಂದ್ರ ಮತ್ತು ಅತ್ಯಾಧುನಿಕ ಮಾಲೆಕ್ಯುಲರ್‌ ಬಯಾಲಜಿ ಪ್ರಯೋಗಾಲಯದ ಉದ್ಘಾಟಣೆಯನ್ನು ನೆರವೇರಿಸಿದ್ದಾರೆ. * ನೂತನವಾಗಿ ಆರಂಭವಾಗಿರುವ ಈ ಲೇಸರ್‌ ಸಂಶೋಧನಾ ಕೇಂದ್ರದಲ್ಲಿ ಹಾರ್ಡ್‌ ಟಿಷ್ಯು ಲೇಸರ್‌ ಉಪಕರಣ ಮತ್ತು ಸಾಫ್ಟ್‌ ಟಿಷ್ಯು ಲೇಸರ್‌ ಉಪಕರಣವನ್ನು ಅಳವಡಿಸಲಾಗಿದೆ. ಬಾಯಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು, ಹಲ್ಲಿನ ಹುಳುಕುಗಳನ್ನು ಸರಿಪಡಿಸಲು, ಶಸ್ತ್ರಚಿಕಿತ್ಸೆ ಹಾಗೂ ಹಲ್ಲಿನ ನರಗಳ ಚಿಕಿತ್ಸೆಗೆ ಈ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ಈ ಮೊದಲು ದಂತವಿಜ್ಞಾನಕ್ಕೆ ಸಂಬಂಧಪಟ್ಟಿರುವ ಲೇಸರ್‌ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚವನ್ನು ಭರಿಸಬೇಕಾಗಿತ್ತು. ಇದೀಗ ಈ ನೂತನ ಲೇಸರ್ ಯಂತ್ರದ ಮೂಲಕ ನಮ್ಮಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಲೇಸರ್‌ ಸಂಶೋಧನಾ ಕೇಂದ್ರವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವು ಸ್ಥಾಪಿಸಿದೆ. ಈ ರೀತಿಯ ಸೌಕರ್ಯವನ್ನು ಹೊಂದಿರುವ ದಕ್ಷಿಣ ಭಾರತದ ಮೊದಲ ಸರ್ಕಾರಿ ಆಸ್ಪತ್ರೆ ಇದಾಗಿದೆ ಇದು ಹೆಮ್ಮೆಯ ಸಂಗತಿಯಾಗಿದೆ. * ಈ ಅತ್ಯಾಧುನಿಕ ಮಾಲೆಕ್ಯುಲರ್‌ ಬಯಾಲಜಿ ಪ್ರಯೋಗಾಲಯದಲ್ಲಿ (RTPCR), ಮಲ್ಟಿಪ್ಲೆಕ್ಸ್‌ ಪಿಸಿಆರ್‌, DNA ಸರಣಿ, ಇನ್‌ ಸಿಟು ಹೈಬ್ರಿಡೈಜೇಷನ್‌ ಇನ್ನಿತರ ತಂತ್ರಜ್ಞಾನಗಳ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬ್ಯಾಕ್ಟಿರಿಯಾ ಹಾಗೂ ವೈರಸ್‌ಗಳಂತಹ ರೂಪಾಂತರಿ ತಳಿಗಳ ಹಾಗೂ ಹೊಸ ಬಗೆಯ ಸೂಕ್ಷ್ಮಾಣುಜೀವಿಗಳ ಪತ್ತೆಗೆ ಈ ತಂತ್ರಜ್ಞಾನವು ಸಹಕಾರಿಯಾಗಿದೆ ಎಂದಿದ್ದಾರೆ. * ಬೆಂಗಳೂರು ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಾಂತರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಹಲ್ಲಿನ ಚಿಕಿತ್ಸೆ ಒದಗಿಸಲು ಸುಸಜ್ಜಿತ ದಂತ ಚಿಕಿತ್ಸೆ ಸಂಚಾರ ಘಟಕವನ್ನು ಸರ್ಕಾರಿ ದಂತ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯು ಸಿದ್ಧವಾಗಿದೆ, ಈ ವಾಹನಕ್ಕೆ ಡಾ.ಸುಧಾಕರ್‌ ಲೋಕಾರ್ಪಣೆ ಗೊಳಿಸಿದ್ದಾರೆ. * ಈ ದಂತ ಚಿಕಿತ್ಸೆ ಸಂಚಾರ ವಾಹನದಲ್ಲಿ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು TV ಇದೆ. ಇದರಲ್ಲಿ ತಜ್ಞರು ಹಾಗೂ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 12 ಜನ ಇರಲಿದ್ದಾರೆ ಎಂದು ತಿಳಿಸಿದ್ದಾರೆ.