Job Description: * ಭಾರತೀಯ ಪ್ರಯಾಣಿಕರು ಇದೀಗ UPI ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಿಕೊಂಡು UAE'ನಲ್ಲಿ ಪಾವತಿಗಳನ್ನು ಮಾಡಲು ಅವಕಾಶವನ್ನು ಮಾಡಲಾಗಿದೆ. ಇತ್ತೀಚಿಗೆ ಗಲ್ಫ್ ರಾಷ್ಟ್ರದಲ್ಲಿ UPI ಆಧಾರಿತ ಪಾವತಿಗಳನ್ನು ಸಕ್ರಿಯಗೊಳಿಸಲು NPCI ನ ಮಶ್ರೆಕ್ ಬ್ಯಾಂಕ್‌ನ NEOPAY'ನ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ. * ಪ್ರಸ್ತುತ UAE ನಲ್ಲಿ ಭಾರತೀಯ ವಲಸಿಗರ ಅಪಾರ ಜನಸಂಖ್ಯೆಯನ್ನು ಹೊಂದಿದೆ ಹಾಗೂ ಪಾವತಿ ವಿಧಾನಗಳಲ್ಲಿ ಒಂದಾಗಿರುವ UPI ನ್ನು ಹೊಂದಿರುವ ಭಾರತೀಯ ಪ್ರಯಾಣಿಕರು ದೇಶದಲ್ಲಿ ಪಾವತಿಗಳನ್ನು ಮಾಡಲು ಸಹಾಯಕಾರಿಯಾಗಲಿದೆ ಎಂದಿದ್ದಾರೆ. ಈ ಹಿಂದೆ 2021 ರಲ್ಲಿ UPI ಸೇವೆಗಳನ್ನು ಭೂತಾನ್‌ನಲ್ಲಿನ ಕೇಂದ್ರ ಬ್ಯಾಂಕ್ ರಾಯಲ್ ಮಾನಿಟರಿ ಅಥಾರಿಟಿಯ ಜೊತೆಗೆ ಆರಂಭಿಸಲಾಗಿದೆ. * ಇತ್ತೀಚಿಗೆ UAE ಯಲ್ಲಿ UPI ಕುರಿತು ಮಾತನಾಡಿರುವ ಎನ್‌ಐಪಿಎಲ್(NIPL) CEO 'ರಿತೇಶ್ ಶುಕ್ಲಾ' ನಿಯೋಪೇ(NEOPAY) ಜೊತೆಗಿನ ಸಹಭಾಗಿತ್ವದ ಮೂಲಕ UAE ನಲ್ಲಿ ಭೀಮ್ UPI ಬಳಕೆ ಯಾಗುತ್ತಿರುವದು ಖುಷಿಯ ವಿಚಾರವಾಗಿದೆ ಎಂದಿದ್ದಾರೆ. ಇದೀಗ ಭಾರತೀಯ ನಾಗರಿಕರ ಪಾವತಿ ವಿಧಾನವು NIPL ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸುವದು ಹಾಗೂ ನಮ್ಮ ಅತ್ಯಾಧುನಿಕ ಪರಿಹಾರಗಳ ಜೊತೆಗೆ ವಿಶ್ವದಾದ್ಯಂತ ಡಿಜಿಟಲ್ ಸಾರ್ವಜನಿಕ ಸರಕುಗಳನ್ನು ಚಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಇದೀಗ UAE ನಲ್ಲಿ UPI ಯು NEOPAY ಟರ್ಮಿನಲ್‌ಗಳನ್ನು ಹೊಂದಿರುವ UAE ಅಂಗಡಿಗಳಲ್ಲಿ ಮಾತ್ರ UPI ಪಾವತಿಗಳು ಮಾಡಲು ಸಾಧ್ಯವಾಗಲಿದೆ ಎಂದಿದ್ದಾರೆ. ಅದರಲ್ಲೂ UPI ಪಾವತಿಗಳನ್ನು ಬೆಂಬಲಿಸುವ BHIM ನಂತಹ ಮೊಬೈಲ್ ಅಪ್ಲಿಕೇಶನ್‌ ಗಳ ಬಳಕೆದಾರರು ಭಾರತೀಯ ಬ್ಯಾಂಕ್ ಖಾತೆಯೊಂದಿಗೆ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿರುತ್ತದೆ. * ಪ್ರಸ್ತುತ ಭೂತಾನ್ ಹಾಗೂ ನೇಪಾಳದಲ್ಲಿ UPI ಪಾವತಿಗಳನ್ನು ಸ್ವೀಕರಿಸಲಾಗಿದೆ.