Job Description: * ಇತ್ತೀಚಿಗೆ ಸುಮನ್ ಕೆ.ಬೆರಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕವಾಗಿದ್ದರೆ. ಹಾಲಿ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಹಠಾತ್ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಸುಮನ್ ಕೆ. ಬೆರಿ ವಹಿಸಿಕೊಳ್ಳಲಿದ್ದಾರೆ. ಬೆರಿ ಅವರು 2022 ರ ಮೇ 1 ರಂದು ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರವು ಅಧಿಕೃತವಾಗಿ ಹೇಳಿಕೆ ನೀಡಿದೆ. * ಪ್ರಧಾನಿ ಮಂತ್ರಿಯವರು ಈ ನೀತಿ ಆಯೋಗದ ಅಧ್ಯಕ್ಷರಾಗಿರುತ್ತಾರೆ. * ರಾಜೀವ್ ಕುಮಾರ್ ಅವರ ಅಧಿಕಾರ ಅವಧಿಯು ಇದೇ ಎಪ್ರಿಲ್. 30 ರಂದು ಕೊನೆಗೊಳ್ಳಲಿದೆ. ಈಗಾಗಲೇ ರಾಜೀವ್ ಕುಮಾರ್ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿದೆ, ಅದರಂತೆ ಎಪ್ರಿಲ್. 30 ರಿಂದ ಅನ್ವಯವಾಗುವ ರೀತಿಯಲ್ಲಿ ಈ ಹುದ್ದೆಯನ್ನು ತ್ಯಜಿಸಲಿದ್ದಾರೆ. ನಂತರದಲ್ಲಿ ಸುಮನ್ ಕೆ.ಬೆರಿ ಅವರು ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. * ಪ್ರಮುಖ ಅರ್ಥಶಾಸ್ತ್ರಜ್ಞರಾಗಿರುವ ರಾಜೀವ್ ಕುಮಾರ್ ಈ ಹಿಂದೆ 2017 ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಇವರು ತಮ್ಮ ಅಧಿಕಾರದಲ್ಲಿ ಕೃಷಿಗೆ ಆದ್ಯತೆ, ಆಸ್ತಿಗಳ ನಗದೀಕರಣ, ಹೂಡಿಕೆ ಹಿಂತೆಗೆತ, ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಇನ್ನು ಹಲವಾರು ನೀತಿ ಆಯೋಗದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. * ನೂತನ ಅಧ್ಯಕ್ಷರಾಗಿರುವ ಬೆರಿ ಅವರು ಈ ಮೊದಲು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನೆಯ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ ಇವರು ಪ್ರಧಾನಿಯರ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಮತ್ತು ಹಣಕಾಸು ನೀತಿ ಬಗೆಗಿನ RBI ನ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿದ್ದರು.