Job Description: * ಪ್ರಸ್ತುತ ಮಂಗೋಲಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಲಶಾಲಿ ಕುಸ್ತಿ ಪಟ್ಟು 'ರವಿ ದಹಿಯಾ' ಅವರಿಗೆ ಚಿನ್ನದ ಪದಕ ಲಭಿಸಿದೆ. ಇವರ ನಂತರ ಬಜರಂಗ್ ಪೂನಿಯಾ ಅವರು ಬೆಳ್ಳಿ ಪದಕವನ್ನು ಗೆದ್ದು ಖುಷಿ ಪಟ್ಟರು. * ಈ ಹಿಂದೆ ಟೋಕಿಯೊ ಒಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ 'ರವಿ ದಹಿಯಾ' ಅವರು ಇತ್ತೀಚಿಗೆ ನಡೆದ 57 ಕೆಜಿ ವಿಭಾಗದ ಫೈನಲ್ ಹಂತದಲ್ಲಿ ಕಜಕಸ್ತಾನದ ರಖತ್ ಕಲ್ಜಾನ್ ವಿರುದ್ಧ ಜಯ ಸಾಧಿಸಿದರು. * 70 ಕೆಜಿ ವಿಭಾಗದಲ್ಲಿ ಗೌರವ್ ಬಲಿಯಾನ್ ಬೆಳ್ಳಿ ಪದಕವನ್ನು ಜಯಿಸಿಕೊಂಡಿದ್ದಾರೆ. ಸೀನಿಯರ್ ವಿಭಾಗದಲ್ಲಿ ಇದೇ ಮೊದಲ ಬಾರಿ ಕಣಕ್ಕೆ ಆಗಮಿಸಿರುವ ನವೀನ್ ಅವರು 70 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡರು. ಇವರ ನಂತರ ಸತ್ಯಾವರ್ತ್ ಕಾಡಿಯನ್ ಅವರು 97 ಕೆಜಿ ವಿಭಾಗದ ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ. * ರವಿ ಕುಮಾರ್ ದಹಿಯಾ ಅವರೊಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು, ದಹಿಯಾ 2019 ರ ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ ನಿಂದ ಕಂಚಿನ ಪದಕ ವಿಜೇತೆ ಹಾಗೂ '03' ಬಾರಿ ಏಷ್ಯನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.