Job Description: * ಪ್ರಸ್ತುತ ಭಾರತದಲ್ಲಿನ ಪಂಚಾ ಯತ್‌ ರಾಜ್‌ ವ್ಯವಸ್ಥೆಯು ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ 1950 ರ ದಶಕದಲ್ಲಿ ಗ್ರಾಮೀಣ ಭಾರತದ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.70 ರಷ್ಟಿತ್ತು. * ಭಾರತದಲ್ಲಿ ಪಂಚಾಯತ್‌ರಾಜ್‌ ಪರಿಕಲ್ಪನೆಯು ಹೊಸ ಅವಿಷ್ಕಾರವಲ್ಲ, ಈ ಹಿಂದೆ ಪ್ರಾಚೀನ ಕಾಲದಿಂದ ದೇಶದಲ್ಲಿನ ಹಳ್ಳಿಗಳ ಮಟ್ಟದಲ್ಲಿ ಆಡಳಿತ ವ್ಯವಸ್ಥೆ ಈ ರೀತಿಯಲ್ಲಿತ್ತು ಎನ್ನಲಾಗಿದೆ. * ಈ ಹಿಂದೆ ಭಾರತ ಸರ್ಕಾರವು 1952-53 ರಲ್ಲಿ ಗ್ರಾಮೀಣ ಜನರನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಹಾಗೂ ರಾಷ್ಟ್ರೀಯ ವಿಸ್ತರಣ ಸೇವೆಯನ್ನು ಜಾರಿಗೆತಂದಿತು. ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಮೊದಲ ಬಾರಿಗೆ 1959 ರ ಅಕ್ಟೋಬರ್‌. 2 ರಂದು ಆಗಿನ ಪ್ರಧಾನಿ ನೆಹರೂ ಅವರು ರಾಜಸ್ಥಾನದ ನಾಗೂರು ಜಿಲ್ಲೆಯಲ್ಲಿ ಉದ್ಘಾಟಿಸಿದರು. 2020 ನೇ ಜನವರಿಯ ವರದಿಯ ಪ್ರಕಾರ ಪ್ರಸ್ತುತ 670 ಕ್ಕಿಂತಲೂ ಹೆಚ್ಚು ಜಿಲ್ಲಾ ಪಂಚಾಯತ್‌ಗಳು, 6,800 ಕ್ಕಿಂತಲೂ ಅಧಿಕ ತಾಲೂಕು ಪಂಚಾಯತ್‌ಗಳು, 2,60,000 ಕ್ಕಿಂತಲೂ ಅಧಿಕ ಗ್ರಾಮ ಪಂಚಾಯತ್‌ಗಳು ದೇಶದಲ್ಲಿ ಸ್ಥಳೀಯ ಸರ್ಕಾರ್ಗಳಿಗಾಗಿ ಕೆಲಸ ಮಾಡುತ್ತಿವೆ. * ಪ್ರಸ್ತುತ ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಸರಿ ಸುಮಾರು ದೇಶದಲ್ಲಿ 10 ಲಕ್ಷಕ್ಕೂ ಅಧಿಕ ಮಹಿಳಾ ಪ್ರತಿನಿಧಿಗಳ ಸೇರಿ 30 ಲಕ್ಷಕ್ಕೂ ಅಧಿಕ ಜನಪ್ರತಿನಿಧಿಗಳನ್ನು ಹೊಂದಿದೆ. * ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿನ ಮಾಹಿತಿಯ ಪ್ರಕಾರ ಒಟ್ಟು 31 ಜಿ. ಪಂ., 226 ತಾ. ಪಂ. ಹಾಗೂ 6,000 ಕ್ಕೂ ಅಧಿಕ ಗ್ರಾ. ಪಂ.ಗಳಿವೆ, ಅವುಗಳಲ್ಲಿ 50 ಸಾವಿರಕ್ಕೂ ಅಧಿಕ ಮಹಿಳಾ ಜನಪ್ರತಿನಿಧಿಗಳಿದ್ದಾರೆ. * 1992 ರ 73 ನೇ ಸಂವಿಧಾನ ತಿದ್ದುಪಡಿ ಕಾಯಿದೆ ಅನುಸಾರ ಗ್ರಾ. ಪಂ., ತಾ. ಪಂ. ಮತ್ತು ಜಿ. ಪಂ.ಎಂಬ 3 ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗಿದೆ. ಈ ತಿದ್ದುಪಡಿ ಕಾಯಿದೆಯು 1993 ರ ಎಪ್ರಿಲ್‌. 24 ರಂದು ರಾಷ್ಟ್ರಾದ್ಯಂತ ಅನುಷ್ಠಾನಕ್ಕೆ ಬಂದಿದೆ. * ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ರಾಷ್ಟ್ರೀಯ ದಿನವಾಗಿದೆ, ಈ ದಿನವನ್ನು ವಾರ್ಷಿಕವಾಗಿ ಏಪ್ರಿಲ್. 24 ರಂದು ಪಂಚಾಯತ್ ರಾಜ್ ಸಚಿವಾಲಯವು ಆಚರಣೆ ಮಾಡುತ್ತದೆ. * ಈ ಹಿಂದೆ 2010 ರ ಏಪ್ರಿಲ್. 24 ರಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಘೋಷಣೆ ಮಾಡಿದ್ದಾರೆ.