Job Description: * ಇದೀಗ ಭಾರತವು ಚೀನಾ ಪ್ರಜೆಗಳಿಗೆ ನೀಡಲಾಗುತ್ತಿದ್ದ 'ಪ್ರವಾಸಿ ವೀಸಾಗಳನ್ನು' ಅಮಾನತುಗೊಳಿಸಿದೆ ಎಂದು ಈ ಬಗ್ಗೆ ಜಾಗತಿಕ ವಿಮಾನಯಾನ ಸಂಸ್ಥೆ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ಮಾಹಿತಿ ನೀಡಿದೆ. * ಇತ್ತೀಚಿಗೆ ಏಪ್ರಿಲ್. 20 ರಂದು ಭಾರತವು ಹೊರಡಿಸಿದ ಸುತ್ತೋಲೆಯಲ್ಲಿ IATA ಯು ತನ್ನ ಸದಸ್ಯ ವಾಹಕಗಳಿಗೆ, 'ಚೀನಾದ ನಾಗರಿಕರಿಗೆ (ಪೀಪಲ್ಸ್ ರಿಪಬ್ಲಿಕ್) ನೀಡಲಾಗಿರುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಲ್ಲ ಎಂದು ಸುತ್ತೋಲೆಯನ್ನು ಹೊರಡಿಸಿದೆ. * ಇದೀಗ ಭೌತಿಕ ತರಗತಿಗಳಿಗೆ ಹಿಂದಿರುಗಲು ಸಾಧ್ಯವಾಗದ ಚೀನಾದ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿರುವ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳ ದುಃಸ್ಥಿತಿಯನ್ನ ಭಾರತವು ಚೀನಾ ದೇಶದ ಜೊತೆಗೆ ಎತ್ತುತ್ತಿದೆ. ಆದರು ನೆರೆಯ ದೇಶವು ಅವರಿಗೆ ಪ್ರವೇಶನೀಡಲು ನಿರಾಕರಿಸಿದೆ. * ಈ ಹಿಂದೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು 2020 ರ ಪ್ರಾರಂಭದಲ್ಲಿ ಈ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ಅಧ್ಯಯನವನ್ನ ತೊರೆದು ಭಾರತಕ್ಕೆ ಹಿಂದಿರುಗಬೇಕಾಯಿತು. ಆ ಸಂಧರ್ಭದಲ್ಲಿ ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕೆಯಿಂದ 2020 ರ ಮಾರ್ಚ್. 27 ರಿಂದ ವೀಸಾ ಹಾಗೂ ನಿವಾಸ ಪರವಾನಗಿಗಳನ್ನ ಸ್ಥಗಿತಗೊಳಿಸುವ ಮೂಲಕ ಚೀನಾ ದೇಶವು ತನ್ನ ಪ್ರಯಾಣಕ್ಕೆ ನಿರ್ಬಂಧವನ್ನು ಹೇರಿತ್ತು. * ಇದೀಗ ಭೂತಾನ್, ಭಾರತ, ಮಾಲ್ಡೀವ್ಸ್ ಹಾಗೂ ನೇಪಾಳದ ಪ್ರಜೆಗಳಾಗಿರುವ ಈ ಕೆಳಗಿನ ಪ್ರಯಾಣಿಕರಿಗೆ ಭಾರತವನ್ನು ಪ್ರವೇಶಿಸಲು ಅವಕಾಶವನ್ನು ನೀಡಲಾಗಿದೆ ಎಂದು IATA ಹೇಳಿಕೆ ನೀಡಿದೆ. ಪ್ರಸ್ತುತ ಭಾರತವು ನೀಡಿದ ನಿವಾಸ ಪರವಾನಗಿ ಹೊಂದಿರುವ ಪ್ರಯಾಣಿಕರು, ವೀಸಾ ಅಥವಾ ಭಾರತ ನೀಡಿದ ಇ-ವೀಸಾ ಹೊಂದಿರುವ ಪ್ರಯಾಣಿಕರು, ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ ಅಥವಾ ಕಿರುಹೊತ್ತಿಗೆಯನ್ನು ಹೊಂದಿರುವ ಪ್ರಯಾಣಿಕರು, ಭಾರತೀಯ ಮೂಲದ ವ್ಯಕ್ತಿಗಳು (PIO) ಕಾರ್ಡ್ ಹೊಂದಿರುವ ಪ್ರಯಾಣಿಕರು, ಹಾಗೂ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವ ಪ್ರಯಾಣಿಕರಿಗೆ ಅವಕಾಶವನ್ನು ನೀಡಲಾಗಿದೆ.