Job Description: * ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಈ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂಧರ್ಭದಲ್ಲಿ 20,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ. * ಇದೀಗ 'ಜಮ್ಮು-ಕಾಶ್ಮೀರದಲ್ಲೀಗ ತಳಹಂತದಲ್ಲಿಯೇ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿದೆ' ಎಂದು ಕಾಶ್ಮೀರ ಯುವಕರಿಗೆ ಹೇಳಲು ಬಯಸುತ್ತೇನೆ ಎಂದರು. ನಿಮ್ಮ ಪೋಷಕರು ಹಾಗೂ ಅಜ್ಜ-ಅಜ್ಜಿಯಂದಿರು ಅನುಭವಿಸಿರುವ ಕಷ್ಟಗಳನ್ನು ಇನ್ನು ಮುಂದೆ ಈ ಕಷ್ಟಗಳನ್ನೂ ನೀವು ಅನುಭವಿಸಬೇಕಿಲ್ಲ ಎಂದಿದ್ದಾರೆ. * ಈ ಬಾರಿ ಪಂಚಾಯತ್ ರಾಜ್ ದಿನವನ್ನು ಜಮ್ಮು ಹಾಗೂ ಕಾಶ್ಮೀರದಲ್ಲಿ ಆಚರಣೆ ಮಾಡಲಾಗುತ್ತಿದೆ. ಇದೊಂದು ದೇಶದಲ್ಲಿನ ದೊಡ್ಡ ಬದಲಾವಣೆ ಹಾಗೂ ಹೆಮ್ಮೆಯ ವಿಷಯವಾಗಿದೆ. * ಈ ಮೂಲಕ ಕೇಂದ್ರಾಡಳಿತ ಪ್ರದೇಶವು ಅಭಿವೃದ್ಧಿಯನ್ನು ಹೊಂದಲು ಸಿದ್ಧವಾಗಿದೆ. ಸ್ವಾತಂತ್ರ್ಯದ ಬಳಿಕ '07' ದಶಕಗಳ ಅವಧಿಯಲ್ಲಿ, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಕೇವಲ 17,000 ಕೋಟಿಗಳ ಖಾಸಗಿ ಹೂಡಿಕೆ ನೀಡಲಾಗಿತ್ತು. ಪ್ರಸ್ತುತ ಹೂಡಿಕೆ ಮೊತ್ತವು 38,000 ಕೋಟಿಗೆ ತಲುಪಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿಕೆ ನೀಡಿದ್ದಾರೆ.