Job Description: * ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಗುಜರಾತ್‌ನ ಜಾಮ್‌ನಗರದಲ್ಲಿ ಡಬ್ಲ್ಯುಎಚ್‌ಒ(WHO)-ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (GCTM)ನ್ನು ಉದ್ಘಾಟಿಸಿದ್ದಾರೆ. * ಇದೊಂದು ಸಾಂಪ್ರದಾಯಿಕ ಔಷಧದ ಸಾಮರ್ಥ್ಯವನ್ನು ತಾಂತ್ರಿಕ ಪ್ರಗತಿ ಮತ್ತು ಸಾಕ್ಷ್ಯಾಧಾರಿತ ಸಂಶೋಧನೆ ಜೊತೆಗೆ ಸಂಯೋಜಿಸುವ ಮೂಲಕ ಅದನ್ನು ಚಾನಲ್ ಮಾಡುವ ಗುರಿಯನ್ನ ಕೇಂದ್ರ ಹೊಂದಿದೆ. * GCTM'ನ '04' ಪ್ರಮುಖ ಆಯಕಟ್ಟಿನ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ, ಪುರಾವೆಗಳು ಹಾಗೂ ಕಲಿಕೆಯ ದತ್ತಾಂಶ ಮತ್ತು ವಿಶ್ಲೇಷಣೆ, ಸುಸ್ಥಿರತೆ ಹಾಗೂ ಸಮಾನತೆ, ಜಾಗತಿಕ ಆರೋಗ್ಯಕ್ಕೆ ಸಾಂಪ್ರದಾಯಿಕ ಔಷಧದ ಕೊಡುಗೆಯನ್ನು ಉತ್ತಮಗೊಳಿಸಲು ನಾವಿನ್ಯತೆ ಹಾಗೂ ತಂತ್ರಜ್ಞಾನ ಬಳಸಲಾಗುತ್ತದೆ. * ಸಾಂಪ್ರದಾಯಿಕ ಔಷಧ ಉತ್ಪನ್ನಗಳ ಮೇಲೆ ನೀತಿಗಳು ಹಾಗೂ ಮಾನದಂಡಗಳನ್ನ ಹೊಂದಿಸಲು, ಸಮಗ್ರ, ಸುರಕ್ಷಿತ ಹಾಗೂ ಒಳ್ಳಯೆ ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ರಚಿಸಲು ದೇಶಗಳಿಗೆ ಸಹಾಯ ಮಾಡಲು GCTM ನ ಪ್ರಯತ್ನಿಸುತ್ತದೆ.