Job Description: * ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಯೋಜನೆಗಳ ಅಭಿವೃದ್ಧಿ ಯೋಜನೆಗಳಿಗೆ ಪರಿಸರ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳನ್ನು ಪರಿಚಯಿಸಿದೆ ಆದರೆ ಪರಿಸರವಾದಿಗಳು ಕಾಳಜಿಯನ್ನು ತೋರಿಸುತ್ತಿರುವ ಹಿನ್ನಲೆಯಿಂದಾಗಿ ತನ್ನ ವ್ಯಾಪ್ತಿಯಿಂದ ಸಂಪೂರ್ಣವಾಗಿ ವಿನಾಯಿತಿಯನ್ನು ಕೊಡಲು ಪ್ರಸ್ತಾಪಿಸಿದೆ. * ಈ ಪ್ರಸ್ತಾವನೆಗಳು ಹಾಗೂ ಬದಲಾವಣೆಗಳು ಎರಡು ಕಚೇರಿ ಜ್ಞಾಪಕ ಪತ್ರಗಳು ಹಾಗೂ ಎರಡು ಅಧಿಸೂಚನೆಗಳ ರೂಪದಲ್ಲಿ 2022 ರ 11 ನೇ ಹಾಗೂ 12 ನೇ ಏಪ್ರಿಲ್ ನಡುವೆ ಹೊರಡಿಸಲಾಗಿದೆ. * ಇದೀಗ 39 ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಪರಿಸರ ಅನುಮತಿ (EC) ಕಡ್ಡಾಯವಾಗಿದೆ. ಅವುಗಳಲ್ಲಿ ಅಭಿವೃದ್ಧಿ ಯೋಜನೆಗಳು ಜಲವಿದ್ಯುತ್, ಗಣಿಗಾರಿಕೆ, ಉಷ್ಣ ವಿದ್ಯುತ್ ಇತ್ಯಾದಿಗಳನ್ನು ಹೊಂದಿದೆ. * ಕ್ಲಿಯರೆನ್ಸ್ ಪ್ರಕ್ರಿಯೆಯನ್ನು ಈ ಹಿಂದೆ 2006 ರಲ್ಲಿ ನೀಡಲಾದ ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (EIA) ಅಧಿಸೂಚನೆಯ ಮೂಲಕ ಹೇಳಿಕೆ ನೀಡಲಾಗಿದೆ. 2022 ಏಪ್ರಿಲ್. 11 ರಂದು ಹೊರಡಿಸಲಾಗಿರುವ ಕರಡು ಅಧಿಸೂಚನೆಯಲ್ಲಿ, ಕೇಂದ್ರ ಪರಿಸರ ಸಚಿವಾಲಯವು ದೇಶದಾದ್ಯಂತ ಹೆದ್ದಾರಿ ಯೋಜನೆಗಳನ್ನು ಪರಿಸರ ಕ್ಲಿಯರೆನ್ಸ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಲು ಪ್ರಸ್ತಾವಣೆಯನ್ನು ಮಾಡಲಾಗಿದೆ, ಹಾಗೆಯೇ ಇದು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಹಾಗೂ ಮುಖ್ಯವಾಗಿ ಘನತ್ಯಾಜ್ಯ, ಜೀವರಾಶಿಯ ಮೇಲೆ ಕಾರ್ಯನಿರ್ವಹಿಸಲಾಗುತ್ತದೆ, ಹಾಗೂ ಕಲ್ಲಿದ್ದಲು, ಪೆಟ್ರೋಲ್ ಅಥವಾ ಲಿಗ್ನೈಟ್‌ನ 15 ಪ್ರತಿಶತದವರೆಗೆ ಸಹಾಯಕ ಇಂಧನವಾಗಿ ಬಳಸುವ 15 MW ಉಷ್ಣ ವಿದ್ಯುತ್ ಸ್ಥಾವರಗಳನ್ನು 25 MW ವರೆಗೆ ಹೆಚ್ಚಿಸಲು ಅನುಮತಿ ನೀಡಲು ಪ್ರಸ್ತಾವಣೆಯನ್ನು ನೀಡಲಾಗಿದೆ. ಈ ಕರಡು ಅಧಿಸೂಚನೆಯು ಪ್ರಕಾರ ಮಾಲಿನ್ಯ ಸಾಮರ್ಥ್ಯದ ಕಡಿಮೆ ಸಾಮರ್ಥ್ಯವಿರುವ ದೋಣಿಗಳನ್ನು ಬಳಸುವ ಮೀನುಗಾರರಿಗೆ ಬಂದರುಗಳ ವಿಸ್ತರಣೆ, ಹಾಗೂ ವಿಮಾನ ನಿಲ್ದಾಣಗಳಲ್ಲಿ ಟರ್ಮಿನಲ್ ಕಟ್ಟಡಗಳ ವಿಸ್ತರಣೆಯನ್ನು ಅನುಮತಿಸುತ್ತದೆ. * 2022 ರ ಏಪ್ರಿಲ್. 12 ರಂದು ಜಲ, ಪರಮಾಣು ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾವಿತ ಬದಲಾವಣೆಗಳು ಜಲ ಮತ್ತು ಪರಮಾಣು ಯೋಜನೆಗಳಿಗೆ ಪರಿಸರ ಅನುಮತಿಯ ಮಾನ್ಯತೆಯನ್ನು ವಿಸ್ತರಣೆ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹಾಗೂ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ, 1957 ರ ಅಡಿಯಲ್ಲಿ, ಗಣಿಗಾರಿಕೆ ಗುತ್ತಿಗೆಯನ್ನು 50 ವರ್ಷಗಳವರೆಗೆ ನೀಡಲಾಗುತ್ತದೆ ಹಾಗೂ ಗಣಿಗಾರಿಕೆ ಗುತ್ತಿಗೆಗಳಿಗೆ EC ಮಾನ್ಯತೆಯನ್ನು 30 ವರ್ಷಗಳವರೆಗೆ ನೀಡಲಾಗುತ್ತದೆ ಎಂದಿದ್ದಾರೆ.