Job Description: * ಪ್ರಸ್ತುತ ಆಫ್ರಿಕನ್ ಖಂಡದ ಅತ್ಯಂತ ಕೈಗಾರಿಕೀಕರಣಗೊಂಡಿರುವ ದಕ್ಷಿಣ ಆಫ್ರಿಕಾವು ತನ್ನ ನೆರೆಯ ದೇಶಗಳಿಗೆ ನಿಯಮಿತವಾಗಿ ಅಪ್ಪಳಿಸುವ ಉಷ್ಣವಲಯದ ಚಂಡಮಾರುತಗಳಿಂದ ಅತೀ ಹೆಚ್ಚಾಗಿ ತಪ್ಪಿಸಿಕೊಂಡಿದೆ. ಆದರೆ ಇತ್ತೀಚಿಗೆ ಪೂರ್ವ ಕರಾವಳಿ ನಗರವಾದ ಡರ್ಬನ್‌ಗೆ ಚಂಡಮಾರುತಗಳು ಅಪ್ಪಳಿಸಿವೆ, ಇದರಿಂದಾಗಿ ಭೂಕುಸಿತಗಳು ಹಾಗೂ ಭಾರೀ ಪ್ರವಾಹಗಳನ್ನು ಉಂಟುಮಾಡಿದೆ, ಇದು 440 ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದೆ. * ಇದೀಗ ಹವಾಮಾನಶಾಸ್ತ್ರಜ್ಞರು ಈ ಚಂಡಮಾರುತಗಳನ್ನು ಉಷ್ಣವಲಯವಲ್ಲ ಎಂದು ವರದಿ ಮಾಡಿದ್ದಾರೆ. ಬದಲಾಗಿ 'ಕಟ್-ಆಫ್ ಲೋ' ಎಂದು ಕರೆಯುವ ದಕ್ಷಿಣ ಆಫ್ರಿಕಾದ ಹವಾಮಾನ ವ್ಯವಸ್ಥೆಯ ಭಾಗವಾಗಿದೆ ಎಂದಿದ್ದಾರೆ, ಇದು ಶೀತ ಹವಾಮಾನ ಹಾಗೂ ಭಾರೀ ಮಳೆಯನ್ನು ತರಲಿದೆ ಎಂದಿದ್ದಾರೆ. ಈ ಪ್ರದೇಶ ಭಾರಿ ಪ್ರವಾಹಕ್ಕೆ ಕಾರಣವಾಗಿದೆ. ಬೆಚ್ಚಗಿನ ಸಮುದ್ರಗಳು ವಾತಾವರಣದಲ್ಲಿ ತೇವಾಂಶವನ್ನು ಹೆಚ್ಚಿಸುವು ನಿಟ್ಟಿನಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. * ಪ್ರತಿ ವರ್ಷವು ಡರ್ಬನ್ ಪ್ರವಾಹವನ್ನು ಅನುಭವಿಸುತ್ತದೆ ಆದರೆ ಇದು ತೀವ್ರವಾಗಿರುವುದಿಲ್ಲ ಎಂದಿದ್ದಾರೆ. ನಗರವನ್ನು ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾಗಿದೆ ಹಾಗೂ ಪ್ರವಾಹವನ್ನು ಸುಗಮಗೊಳಿಸುವ ಬಹುತೇಕ ಕಮರಿಗಳನ್ನು ಹೊಂದಿದೆ. ಹಾಗೆಯೇ ಗುಡ್ಡಗಾಡು ಪ್ರದೇಶಗಳಲ್ಲಿನ ಮಣ್ಣನ್ನು ಸರಿಯಾಗಿ ಸ್ಥಿರಗೊಳಿಸದಿದ್ದರೆ ಆ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತದೆ ಎಂದಿದ್ದಾರೆ, ಹೀಗಾಗಿ ಇತ್ತೀಚೆಗೆ ಇಂತಹ ಪ್ರಚಂಡ ಪ್ರವಾಹಗಳು ಉಂಟಾಗಿವೆ ಎಂದಿದ್ದಾರೆ. * ಪ್ರಸ್ತುತ ಡರ್ಬನ್ ನಗರವು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಈ ನಗರದ ಬಡವರು ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಾರೆ. ಡರ್ಬನ್‌ನಲ್ಲಿ 3.9 ಮಿಲಿಯನ್ ಜನರು ನಗರದಾದ್ಯಂತ ಇರುವ 550 ಅನೌಪಚಾರಿಕ ವಸಾಹತುಗಳಲ್ಲಿ ವಾಸವಾಗಿದ್ದಾರೆ. ಈ ವಸಾಹತುಗಳಲ್ಲಿ 164 ನ್ನು ಪ್ರವಾಹ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.