Job Description: * ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಭಾರತೀಯ ಸೇನೆಯ 29 ನೇ ಮುಖ್ಯಸ್ಥರಾಗಲಿದ್ದಾರೆ. * ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಸೇನಾ ಸಿಬ್ಬಂದಿ ಮುಖ್ಯಸ್ಥರಾಗಲು (COAS) ಮೊದಲ ಎಂಜಿನಿಯರ್ ಆಗಿದ್ದಾರೆ. ಇವರು 2022 ರ ಮೇ. 01 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಫೆಬ್ರವರಿ. 01 ರಂದು ಲೆಫ್ಟಿನೆಂಟ್ ಜನರಲ್ ಸಿಪಿ ಮೊಹಂತಿ ಅವರನ್ನು ಉಪ ಸೇನಾ ಮುಖ್ಯಸ್ಥರಾಗಿ ಬದಲಾಯಿಸಿದ್ದಾರೆ. * ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ವಾಸ್ಲಾದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇವರು 1982 ರಲ್ಲಿ IMA ಯಿಂದ ಉತ್ತೀರ್ಣರಾದ ನಂತರ ಬಾಂಬೆ ಸ್ಯಾಪರ್ಸ್‌ಗೆ ಸೇವೆ ಸಲ್ಲಿಸಲು ಸೇರಿದ್ದರು. ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ತಮ್ಮ 39 ವರ್ಷಗಳ ಮಿಲಿಟರಿ ವೃತ್ತಿಜೀವನದಲ್ಲಿ ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಪ್ರತಿ-ಬಂಡಾಯ ಹಾಗೂ ಸಾಂಪ್ರದಾಯಿಕ ಕಾರ್ಯಾಚರಣೆಗಳಲ್ಲಿ ಪ್ರತಿಷ್ಠಿತ ಕಮಾಂಡ್ ಹಾಗೂ ಸಿಬ್ಬಂದಿ ನಿಯೋಜನೆಗಳನ್ನು ಹೊಂದಿದ್ದಾರೆ. ಇವರು ಇಂಜಿನಿಯರ್ ಬ್ರಿಗೇಡ್‌ಗೆ ಕಮಾಂಡ್ ಆಗಿದ್ದರು. ಇವರು ಲಡಾಖ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ (LOC) ಪದಾತಿ ದಳಕ್ಕೆ ಹಾಗೂ ದೇಶದ ಈಶಾನ್ಯ ಪ್ರದೇಶದಲ್ಲಿ ಕಾರ್ಪ್ಸ್‌ಗೆ ಕಮಾಂಡ್ ಮಾಡಿದ್ದಾರೆ. ಸೇನೆಯ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಇವರು ಪೂರ್ವ ಸೇನಾ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. * ಇವರು 2020 ರ ಜೂನ್ ನಿಂದ 2021 ರ ಮೇ ರವರೆಗೆ ಅಂಡಮಾನ್ ಹಾಗೂ ನಿಕೋಬಾರ್ ಕಮಾಂಡ್‌ ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಜನರಲ್ ನರವಣೆ ನಿವೃತ್ತರಾದ ಬಳಿಕ ಸೇನೆಯ ಅತ್ಯಂತ ಹಿರಿಯ ಅಧಿಕಾರಿ ಇವರಾಗಿರುತ್ತಾರೆ. * ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ಅತಿ ವಿಶಿಷ್ಟ ಸೇವಾ ಪದಕ, ಪರಮ ವಿಶಿಷ್ಟ ಸೇವಾ ಪದಕ, ಮತ್ತು ವಿಶಿಷ್ಟ ಸೇವಾ ಪದಕ, '02' ಬಾರಿ GOC-in-C ಶ್ಲಾಘನೆ ಹಾಗೂ ಸೇನಾ ಮುಖ್ಯಸ್ಥರ ಶ್ಲಾಘನೆಯೊಂದಿಗೆ ನೀಡಲಾಗಿದೆ.