Job Description: * ಪ್ರಸ್ತುತ ಉಡುಪಿ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಭಕ್ತರಿಗೆ ನೀಡಲಾಗುವಂತ ಉಚಿತ ಭೋಜನ ಪ್ರಸಾದ ಹಾಗೂ ದೇವರಿಗೆ ಅರ್ಪಿಸುವ ನೈವೇದ್ಯ ಗುಣಮಟ್ಟದಿಂದ ಕೂಡಿದೆ, ಹಾಗೂ ಇದು ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ಎಂದು ಭಾರತ ಸರ್ಕಾರದ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ಪ್ರಾಮಾಣಪತ್ರವನ್ನು ನೀಡಿದೆ. * ಇದೀಗ ಉಡುಪಿಯ ಆಹಾರ, ಗುಣಮಟ್ಟ ನಿಯಂತ್ರಣಾ ಅಧಿಕಾರಿ ಡಾ.ಪ್ರೇಮಾನಂದ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ, ಪ್ರಸ್ತುತ ದೇವಳದ ಆಹಾರ ತಯಾರಿಕೆ ಕೊಠಡಿ ಅತ್ಯಂತ ಸುಸಜ್ಜಿತವಾಗಿದೆ. ಮಳೆ ನೀರು ಸೋರುವಿಕೆಯಿಲ್ಲ. ಗುಣಮಟ್ಟದ ಗೋಡೆ ಮತ್ತು ಉತ್ತಮ ನೆಲಹಾಸು ಸೌಲಭ್ಯವಿದೆ, ಹಾಗೂ ತುಕ್ಕು ಹಿಡಿಯದ ಕಿಟಕಿ, ಬಾಗಿಲುಗಳು, ಜೊತೆಗೆ ಉತ್ತಮ ಗುಣಮಟ್ಟದ ಆಹಾರ ತಯಾರಿಸುವ ಪಾತ್ರೆಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಇವೆಲ್ಲದರ ಜೊತೆಗೆ ಉತ್ತಮ ಗಾಳಿ ಬೆಳಕು ಸೌಲಭ್ಯ, ಆಹಾರವನ್ನು ಬಿಸಿ ಹಾಗೂ ತಂಪು ಮಾಡಲು ಬಳಸುವ ಯಂತ್ರೋಪಕರಣಗಳ ಸೌಲಭ್ಯವನ್ನು ಹೊಂದಿದೆ, ಆಹಾರ ತಯಾರಿ ಸಾಮಗ್ರಿಗಳನ್ನು ಶೇಖರಣೆಗೆ ದಾಸ್ತಾನು ಮಾಡಲು ಬಳಸುವ ಕೊಠಡಿ, ತ್ಯಾಜ್ಯ ವ್ಯವಸ್ಥೆ ವಿಲೇವಾರಿ ಸೌಲಭ್ಯ ಕೂಡ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. * ಇದೀಗ ಭಾರತ ಸರ್ಕಾರದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು ಈ ಎಲ್ಲ ಮಾಹಿತಿಯನ್ನು ಗಮನಿಸಿ ಅದರ ಆಧಾರದ ಮೇಲೆ ಪ್ರಮಾಣಪತ್ರ ನೀಡಿದೆ.