Job Description: * ಇದೀಗ 'UN' ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ನೀಡಿರುವ ಮಾಹಿತಿಯ ಪ್ರಕಾರ ಉಕ್ರೇನ್ ಬಿಕ್ಕಟ್ಟು ಮಾನವರ 5 ನೇ ಒಂದು ಭಾಗಕ್ಕಿಂತ ಹೆಚ್ಚಿನ ಅಥವಾ 1.7 ಶತಕೋಟಿ ಜನರನ್ನು ಬಡತನ ಹಾಗೂ ಹಸಿವಿನ ತೊಂದರೆಗೆ ನೂಕಬಹುದಾಗಿದೆ ಎಂದಿದ್ದಾರೆ. * ಈ ಯುದ್ಧವು ಅಭಿವೃದ್ಧಿಶೀಲ ಪ್ರಪಂಚದ ಮೇಲೆ ಮೂಕ ದಾಳಿಯನ್ನು ಆರಂಭಿಸಿದೆ, ಹಾಗೂ ಗೋಧಿ ಮತ್ತು ಬಾರ್ಲಿಯ ವಿಶ್ವದ ಉತ್ಪಾದನೆಯಲ್ಲಿ ಉಕ್ರೇನ್ ಹಾಗೂ ರಷ್ಯಾ 30 ಪ್ರತಿಶತವನ್ನು ಹೊಂದಿದ್ದವು, ಹಾಗೂ ರಷ್ಯಾ ಸೂರ್ಯಕಾಂತಿ ಎಣ್ಣೆಯ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಹೊಂದಿದೆ, ಹಾಗೂ ಉಕ್ರೇನ್ ಆಮದು ಮಾಡಿಕೊಳ್ಳುವ ಗೋಧಿಯ 3ನೇ ಒಂದು ಭಾಗವನ್ನು ಹೊಂದಿದೆ ಎಂದು UN ಮುಖ್ಯಸ್ಥ ಗುಟೆರೆಸ್ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಉಕ್ರೇನ್ ಬಿಕ್ಕಟ್ಟು ಧಾನ್ಯ ರಫ್ತುಗಳನ್ನು ನಿರ್ಬಂಧಿಸುತ್ತಿದೆ ಹಾಗೂ ಪೂರೈಕೆ ಮಾಡುವದನ್ನು ಅಡ್ಡಿಪಡಿಸುತ್ತಿದೆ, ಈ ಹಿನ್ನಲೆಯಿಂದಾಗಿ ಉತ್ಪನ್ನಗಳ ಬೆಲೆಗಳು ಹೆಚ್ಚಾಗಿವೆ ಎಂದು UN ಸೆಕ್ರೆಟರಿ ಜನರಲ್ ಹೇಳಿಕೆ ನೀಡಿದ್ದಾರೆ. ಪ್ರಸ್ತುತ 2022 ರ ಪ್ರಾರಂಭದಿಂದ, ಗೋಧಿ ಹಾಗೂ ಜೋಳದ ಬೆಲೆಗಳು ಶೇ. 30 ರಷ್ಟು ಹೆಚ್ಚಾಗಿದೆ, ಹಾಗೂ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇ. 60 ಕ್ಕಿಂತ ಅಧಿಕವಾಗಿದೆ, ಹಾಗೂ ಅನಿಲ, ರಸಗೊಬ್ಬರ ಬೆಲೆಗಳು ಇರುವದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ. * ಇದೀಗ ಉಕ್ರೇನ್ ಸಂಘರ್ಷವು ಈ ವರ್ಷದಲ್ಲಿ143 ಆರ್ಥಿಕತೆಗಳ ಮುನ್ಸೂಚನೆಗಳನ್ನು ಡೌನ್‌ಗ್ರೇಡ್ ಮಾಡಲಿದೆ ಎಂದು IMF (ಅಂತರರಾಷ್ಟ್ರೀಯ ಹಣಕಾಸು ನಿಧಿ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ವಿಶ್ವದ ಜಿಡಿಪಿಯ ಶೇ. 86 ರಷ್ಟಿದೆ. IMF, ವಿಶ್ವ ಬ್ಯಾಂಕ್, ವಿಶ್ವ ಆಹಾರ ಕಾರ್ಯಕ್ರಮ ಹಾಗೂ ವಿಶ್ವ ವ್ಯಾಪಾರ ಸಂಸ್ಥೆ (WTO) ಮುಖ್ಯಸ್ಥರು ಈ ಬಗ್ಗೆ ಜಂಟಿ ಹೇಳಿಕೆಯನ್ನು ನೀಡಿದ್ದಾರೆ.