Job Description: * ಒಡಿಯಾ ಭಾಷೆಯ ಖ್ಯಾತ ಸಂಗೀತಗಾರ ಹಾಗೂ ಗಾಯಕ ಪ್ರಫುಲ್ಲ ಕರ್ ಅವರು ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇತ್ತೀಚಿಗೆ ಇವರು ಒಡಿಶಾದ ಭುವನೇಶ್ವರದಲ್ಲಿನ ಸತ್ಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. * ಪ್ರಫುಲ್ಲ ಕರ್ ಈ ಹಿಂದೆ 1939 ರಲ್ಲಿ ಜನಿಸಿದ್ದಾರೆ. ಇವರು ಮೇರು ಸಂಗೀತಗಾರ, ಗಾಯಕ, ಗೀತರಚನೆಕಾರ, ಬರಹಗಾರರಾಗಿದ್ದಾರೆ, ಅಷ್ಟೇ ಅಲ್ಲದೇ ಬಹುಮುಖ ಪ್ರತಿಭೆಯಾಗಿದ್ದರು. ಇವರು ಹಲವು ದಶಕಗಳಿಂದ ಸ್ವರ ಹಾಗೂ ಸಂಗೀತ ರಚನೆಯ ಮೂಲಕ ದೇಶದ ಸಂಗೀತ ಪ್ರಿಯರನ್ನು ಮೆಚ್ಚಿಸಿದ್ದರು. * ಇವರು ಕಲೆ ಹಾಗೂ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ, ಹಾಗೆಯೇ ಅವರಿಗೆ 2015 ರಲ್ಲಿ ಭಾರತದ 4 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. * ಪ್ರಫುಲ್ಲ ಕರ್ ಅವರು ಒಡಿಯಾ ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರಕ್ಕೆ ನೀಡಿರುವ ಅತ್ಯುನ್ನತ ಕೊಡುಗೆಗಳನ್ನೂ ಜನರು ಸದಾ ಸ್ಮರಿಸುತ್ತಾರೆ, ಹಾಗೆಯೇ ಇವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. * ಪ್ರಫುಲ್ಲ ಕರ್ ಅವರು 70 ಒರಿಯಾ ಚಲನಚಿತ್ರಗಳಲ್ಲಿ ಹಾಗೂ 4 ಬಾಂಗ್ಲಾ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ ಕೆಲಸ ಮಾಡಿದ್ದಾರೆ.