Job Description: * ತಮಿಳುನಾಡು ರಾಜ್ಯ ಸರ್ಕಾರವು 2022 ರ ಏಪ್ರಿಲ್. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಈ ವರ್ಷದಿಂದ 'ಸಮಾನತೆ ದಿನ' ಎಂದು ಆಚರಿಸಿದೆ. ಹಾಗೆಯೇ ಈ ದಿನದಂದು ರಾಜ್ಯಾದ್ಯಂತ ಪ್ರತಿಜ್ಞೆಯನ್ನೂ ಮಾಡಲಾಗಿದೆ. ಅದರಂತೆಯೇ ರಾಜ್ಯಾದ್ಯಂತ ಎಲ್ಲ ಸರಕಾರಿ ಕಚೇರಿಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಗಿದೆ. * ಡಾ.ಅಂಬೇಡ್ಕರ್ ಅವರ ಆಯ್ದ ಕೃತಿಗಳನ್ನು ತಮಿಳು ಭಾಷೆಯಲ್ಲಿ ಅನುವಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಸಮಾನತೆಯನ್ನು ಸಾಧಿಸುವುದು ಸಾಮಾಜಿಕ ನ್ಯಾಯದ ಗುರಿಯನ್ನು ಹೊಂದಿದೆ. ರಾಜ್ಯ ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಘೋಷಣೆ ಮಾಡಿದ್ದಾರೆ. * ತಮಿಳುನಾಡಿನ ಆದಿ ದ್ರಾವಿಡರ್ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರ ಜನ್ಮದಿನವನ್ನು ಸಮಾನತೆ ದಿನವನ್ನಾಗಿ ಘೋಷಣೆ ಮಾಡಲಾಗಿದೆ. ಹಾಗೆಯೇ ಏಪ್ರಿಲ್ 14 ರಂದು ವಾರ್ಷಿಕವಾಗಿ ಸಮಾನತೆ ದಿನವನ್ನು ಆಚರಿಸುವದಾಗಿ ಹೇಳಿದ್ದರು. * ತಮಿಳುನಾಡು ಸರ್ಕಾರವು ಸೆಪ್ಟೆಂಬರ್. 17 ರಂದು ಪೆರಿಯಾರ್ ಅವರ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನ ಎಂದು ಘೋಷಣೆ ಮಾಡಿದೆ.