Job Description: * ಭಾರತೀಯ ಹವಾಮಾನ ಇಲಾಖೆ (IMD) ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ನೈಋತ್ಯ ಮಾನ್ಸೂನ್ ಋತುವಿನ ಮಳೆಯ ದೀರ್ಘಾವಧಿಯ ಮುನ್ಸೂಚನೆಯನ್ನು ನೀಡಿದೆ. ಹಾಗೆಯೇ ಈ ವರ್ಷ ಮಳೆಯು ಸಾಮಾನ್ಯವಾಗಿದೆ ಎಂದು ತಿಳಿಸಿದೆ. * IMD ಯ ದೀರ್ಘ-ಶ್ರೇಣಿಯ ಮುನ್ಸೂಚನೆಯನ್ನು '02' ಹಂತಗಳಲ್ಲಿ ನೀಡುತ್ತದೆ. ಮೊದಲ ಮುನ್ಸೂಚನೆಯು ಏಪ್ರಿಲ್ ತಿಂಗಳಲ್ಲಿ ನೀಡುತ್ತದೆ. 2 ನೇ ಮುನ್ಸೂಚನೆಯನ್ನು ಮೇ ತಿಂಗಳಿನ ಕೊನೆಯಲ್ಲಿ ನೀಡುತ್ತದೆ. * ಪ್ರಸ್ತುತ ದೇಶದಲ್ಲಿ, 1971 ರಿಂದ 2020 ರ ಅವಧಿಯ ವೇಳೆಗೆ, ದೀರ್ಘಾವಧಿಯ ಸರಾಸರಿ ಋತುಮಾನದ ಮಳೆಯು ಪ್ರಮಾಣವು 87 ಸೆಂ.ಮೀ. ರಷ್ಟಿದೆ. * ಈಶಾನ್ಯ ಭಾರತದ ಹಲವು ಪ್ರದೇಶಗಳು, ದಕ್ಷಿಣ ಪೆನಿನ್ಸುಲಾದ ದಕ್ಷಿಣ ಭಾಗಗಳು ಹಾಗೂ ವಾಯುವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಮಳೆಯ ಕಡಿಮೆ ಇರಲಿದೆ ಎಂದಿದೆ. ಇತ್ತೀಚಿಗೆ ಬಿಡುಗಡೆಯಾದ ಮುನ್ಸೂಚನೆಯ ಪ್ರಕಾರ ದೇಶದಲ್ಲಿ ನೈಋತ್ಯ ಮಾನ್ಸೂನ್ ಕಾಲೋಚಿತ ಮಳೆಯು ಸಾಮಾನ್ಯವಾಗಿದೆ, ಅಂದರೆ ದೀರ್ಘಾವಧಿಯ ಸರಾಸರಿ (LPA) 96 ರಿಂದ 104 ಪ್ರತಿಶತದಷ್ಟಿದೆ. * ಶೇ. 90 ಕ್ಕಿಂತ ಕಡಿಮೆ ಮಳೆಯು 'ಕೊರತೆ' ವರ್ಗದ ಅಡಿಯಲ್ಲಿ ಬರಲಿದೆ, ಅದು 90 ರಿಂದ 96 ಪ್ರತಿಶತದಷ್ಟು ಇರುವಾಗ ಸಾಮಾನ್ಯಕ್ಕಿಂತ ಕಡಿಮೆ ಎಂದು ವರ್ಗೀಕರಿಸಲಾಗಿದೆ, ಸಾಮಾನ್ಯಕ್ಕಿಂತ ಹೆಚ್ಚಿನದು ಅದುವೇ 104 -110 ಪ್ರತಿಶತ ಹಾಗೂ ಅಧಿಕವಾದಾಗ ವರ್ಗೀಕರಿಸಲಾಗುತ್ತದೆ. 110 ಪ್ರತಿಶತಕ್ಕಿಂತ ಹೆಚ್ಚಾದಾಗ ವರ್ಗೀಕರಿಸಲಾಗಿದೆ.