Job Description: * ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI ) ವಾಟ್ಸಾಪ್‌ಗಾಗಿ UPI ನಲ್ಲಿ ಹೆಚ್ಚುವರಿ 60 ಮಿಲಿಯನ್ ಬಳಕೆದಾರರನ್ನು ಅನುಮೋದಿಸಿದೆ. ಈ ಅನುಮೋದನೆಯ ಜೊತೆಗೆ ವಾಟ್ಸಾಪ್ ತನ್ನ 100 ಮಿಲಿಯನ್ ಬಳಕೆದಾರರಿಗೆ ಈ ಸೇವೆಯನ್ನು ವಿತರಣೆ ಮಾಡಲು ಸಾಧ್ಯವಾಗುತ್ತದೆ ಎಂದು NPCI ನಿರ್ಧಾರವನ್ನು ಬಹಿರಂಗ ಪಡಿಸಿದೆ. * ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಇದೊಂದು ಡಿಜಿಟಲ್ ಮೋಡ್ ಮೂಲಕ ಚಿಲ್ಲರೆ ಪಾವತಿ ವಿಧಾನ. NPCI ಭಾರತದಲ್ಲಿ ಚಿಲ್ಲರೆ ಪಾವತಿ ಹಾಗೂ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುತ್ತಿರುವ ಛತ್ರಿ ಸಂಸ್ಥೆಯಾಗಿದೆ. * ಪ್ರಸ್ತುತ ದೇಶದಲ್ಲಿ ಬಲವಾದ ಪಾವತಿ ಹಾಗೂ ಇತ್ಯರ್ಥ ಮೂಲಸೌಕರ್ಯವನ್ನು ಸೃಷ್ಟಿಸಲಿದೆ ಹಾಗೂ ರುಪೇ ಕಾರ್ಡ್, ತಕ್ಷಣದ ಪಾವತಿ ಸೇವೆ (IMPS), ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI), ಭಾರತ್ ಇಂಟರ್ಫೇಸ್ ಫಾರ್ ಮನಿ (BHIM), ಭೀಮ್ ಆಧಾರ್, ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಹಾಗೂ ಭಾರತ್ ಬಿಲ್ಪೇಯಂತಹ ಚಿಲ್ಲರೆ ಪಾವತಿ ಉತ್ಪನ್ನಗಳ ಮೂಲಕ ಪಾವತಿಗಳನ್ನು ಮಾಡುವ ವಿಧಾನವನ್ನು ಬದಲಾವಣೆ ಮಾಡಿದೆ. * ಇದೀಗ ತಂತ್ರಜ್ಞಾನದ ಬಳಕೆಯ ಮೂಲಕ ಚಿಲ್ಲರೆ ಪಾವತಿ ವ್ಯವಸ್ಥೆಗಳಲ್ಲಿ ಹೊಸ ಆವಿಷ್ಕಾರಗಳನ್ನು ತರುವ ನಿಟ್ಟಿನಲ್ಲಿ NPCI ಕಾಳಜಿಯನ್ನು ವಹಿಸಿದೆ. ಇದರಿಂದಾಗಿ ಸಂಪೂರ್ಣ ಡಿಜಿಟಲ್ ಸಮಾಜವಾಗಬೇಕೆಂಬ ಭಾರತದ ಆಶಯವನ್ನು ಮುಂದುವರಿಸಿದೆ. ಇದರ ಜೊತೆಗೆ ಕನಿಷ್ಠ ವೆಚ್ಚದಲ್ಲಿ ರಾಷ್ಟ್ರವ್ಯಾಪಿ ಪ್ರವೇಶಗಳ ಜೊತೆಗೆ ಸುರಕ್ಷಿತ ಪಾವತಿ ಪರಿಹಾರಗಳನ್ನು ಸುಗಮಗೊಳಿಸಲಿದೆ ಎಂದು ತಿಳಿಸಲಾಗಿದೆ. * WhatsApp ಮೆಸೆಂಜರ್ ಅಂತರಾಷ್ಟ್ರೀಯವಾಗಿ ಲಭ್ಯವಿರುವ ಅಮೇರಿಕನ್ ಫ್ರೀವೇರ್, ಕ್ರಾಸ್-ಪ್ಲಾಟ್‌ಫಾರ್ಮ್ ಕೇಂದ್ರೀಕೃತ ತ್ವರಿತ ಸಂದೇಶ ಕಳುಹಿಸುವಿಕೆ (IM) ಹಾಗೂ ಮೆಟಾ ಪ್ಲಾಟ್‌ಫಾರ್ಮ್‌ಗಳ ಮಾಲೀಕತ್ವದ ವಾಯ್ಸ್-ಓವರ್ ನ ಸೇವೆಯಾಗಿದೆ. ಬಳಕೆದಾರರು ಈ ಜಾಲತಾಣವನ್ನು ಬಳಸಿಕೊಂಡು ಸಂದೇಶಗಳು ಹಾಗೂ ಧ್ವನಿ ಸಂದೇಶಗಳನ್ನು ಕಳುಹಿಸಬಹುದಾಗಿದೆ. * ಪ್ರಸ್ತುತ WhatsApp ನ ಕ್ಲೈಂಟ್ ಅಪ್ಲಿಕೇಶನ್ ಮೊಬೈಲ್ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸೇವೆಯನ್ನು ಬಳೆಸಲು ಮೊಬೈಲ್ ದೂರವಾಣಿ ಸಂಖ್ಯೆಯ ಅಗತ್ಯವಿದೆ. * WhatsApp 2020 ರ ಫೆಬ್ರವರಿ ವೇಳೆಗೆ ಪ್ರಪಂಚದಾದ್ಯಂತ 2 ಬಿಲಿಯನ್‌ಗಿಂತಲೂ ಅಧಿಕ ಬಳಕೆದಾರರನ್ನು ಹೊಂದಿದೆ. 2016 ರ ಹೊತ್ತಿಗೆ ಲ್ಯಾಟಿನ್ ಅಮೇರಿಕಾ, ಭಾರತೀಯ ಉಪಖಂಡ ಹಾಗೂ ಯುರೋಪ್ ಮತ್ತು ಆಫ್ರಿಕಾದ ದೊಡ್ಡ ಭಾಗಗಳನ್ನು ಸೇರಿದಂತೆ ಪ್ರದೇಶಗಳಲ್ಲಿ ಇಂಟರ್ನೆಟ್ ಸಂವಹನದ ಪ್ರಾಥಮಿಕ ಸಾಧನವಾಗಿದೆ.