Job Description: * ಪ್ರಸ್ತುತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ನಾಲ್ಕು ಪ್ರಮುಖ ಸಂಸ್ಥೆಗಳಿಗೆ ಭಾರತ ಆಯ್ಕೆಯಾಗಿದೆ. ಅದರಲ್ಲಿ ಅಭಿವೃದ್ಧಿಗಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಆಯೋಗ ಸೇರಿದೆ. * ವಿಶ್ವ ಸಂಸ್ಥೆಯು 1945 ರಲ್ಲಿ ಸ್ಥಾಪನೆ ಮಾಡಿದ UN ವ್ಯವಸ್ಥೆಯ '06' ಪ್ರಮುಖ ಅಂಗಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿ ಒಂದಾಗಿದೆ. * ಈ ಮಂಡಳಿಯು ಸಾಮಾನ್ಯ ಸಭೆಯಿಂದ ಚುನಾಯಿತರಾಗಿರುವ ವಿಶ್ವಸಂಸ್ಥೆಯ 54 ಸದಸ್ಯರನ್ನು ಒಳಗೊಂಡಿದೆ. * ಭಾರತವು ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ '04' ಪ್ರಮುಖ ಸಂಸ್ಥೆಗಳಿಗೆ ಆಯ್ಕೆಯಾಗುತ್ತದೆ. ಇದೀಗ ಭಾರತವು ಸಾಮಾಜಿಕ ಅಭಿವೃದ್ಧಿ ಆಯೋಗ, ಎನ್‌ಜಿಒಗಳ ಸಮಿತಿ, ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗಕ್ಕೆಆಯ್ಕೆಯಾಗಿದೆ. ಹಾಗೆಯೇ ರಾಯಭಾರಿಯಾಗಿ ಪ್ರೀತಿ ಸರನ್ ಅವರು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಸಮಿತಿಗೆ ಮರು ಆಯ್ಕೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಭಾರತೀಯ ಮಿಷನ್ ಈ ಬಗ್ಗೆ ಟ್ವೀಟ್ ನ ಮೂಲಕ ಮಾಹಿತಿ ಹಂಚಿಕೊಂಡಿದೆ. * ಇದೀಗ ಭಾರತವು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳನ್ನು ತಿಳಿಸಿದೆ. 2018 ರ ಡಿಸೆಂಬರ್'ನಲ್ಲಿ UN ನ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಸಮಿತಿಯಲ್ಲಿ ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಭಾರತೀಯ ಹಿರಿಯ ರಾಜತಾಂತ್ರಿಕ ಸರನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. * ಹಿರಿಯ ರಾಜತಾಂತ್ರಿಕ ಸರನ್ ಅವರ ಮೊದಲ '04' ವರ್ಷಗಳ ಅವಧಿಯು 2019 ರ ಜನವರಿ. 01 ರಂದು ಆರಂಭವಾಗಿದೆ. ಈ ಹಿಂದೆ ಇವರು 1982 ರ ಆಗಸ್ಟ್ ನಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಯಾಗಿದ್ದರು. ಹಿರಿಯ ರಾಜತಾಂತ್ರಿಕ ಸರನ್ ಅವರು ಮಾಸ್ಕೋ, ಢಾಕಾ, ಕೈರೋ, ಜಿನೀವಾ, ಟೊರೊಂಟೊ ಹಾಗೂ ವಿಯೆಟ್ನಾಂನಲ್ಲಿ ಭಾರತೀಯ ಮಿಷನ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಹಾಗೆಯೇ ಇವರು ಟೊರೊಂಟೊ ಮತ್ತು ವಿಯೆಟ್ನಾಂನಲ್ಲಿ ಭಾರತೀಯ ರಾಯಭಾರಿಯಾಗಿದ್ದರು.