Job Description: * ಕೇಂದ್ರ ಸರ್ಕಾರವು ಜವಳಿ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ 2022 ರ ಸೆಪ್ಟೆಂಬರ್ 30 ರವರೆಗೆ ಹತ್ತಿ ಆಮದಿನ ಮೇಲಿನ ಎಲ್ಲಾ ಕಸ್ಟಮ್ಸ್ ಸುಂಕಗಳನ್ನು ಮನ್ನಾ ಮಾಡಿದೆ. ಪ್ರಸ್ತುತ ಕೇಂದ್ರೀಯ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಮಂಡಳಿ ಅಧಿಸೂಚನೆಯಲ್ಲಿ ಹತ್ತಿ ಆಮದಿನ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್'ಯಿಂದ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ. * ಕೇಂದ್ರ ಸರ್ಕಾರದ ಅಧಿಸೂಚನೆಯು 2022 ರ ಏಪ್ರಿಲ್. 14 ರಂದು ಜಾರಿಗೆಯಾಗಲಿದೆಹಾಗೂ 2022 ರ ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. ಈ ವಿನಾಯಿತಿಯು ಜವಳಿ ಸರಪಳಿ, ಬಟ್ಟೆ, ಉಡುಪುಗಳು ಹಾಗೂ ಮೇಕಪ್‌ಗಳಿಗೆ ಪ್ರಯೋಜನವನ್ನು ನೀಡಲಿದೆ ಹಾಗೂ ಗ್ರಾಹಕರಿಗೆ ಪರಿಹಾರವನ್ನು ಕಲ್ಪಿಸಲಿದೆ, ಇದರ ಜೊತೆಗೆ ಜವಳಿ ರಫ್ತು ಸಹ ಪ್ರಯೋಜನ ಪಡೆಯುಲಿದೆ ಎಂದು ಜವಳಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. * ಇದೀಗ ಕಚ್ಚಾ ಹತ್ತಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 10 ರಿಂದ ಶೂನ್ಯಕ್ಕೆ ಇಳಿಸಿದ್ದಕ್ಕಾಗಿ ಹಣಕಾಸು ಮತ್ತು ಜವಳಿ ಮಂತ್ರಿಗಳಿಗೆ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟವು ಅಭಿನಂದನೆಗಳನ್ನೂ ತಿಳಿಸಿದೆ. ಪ್ರಸ್ತುತ ಹತ್ತಿಯ ಹೆಚ್ಚಿನ ಬೆಲೆಗಳು ಸ್ಪರ್ಧಾತ್ಮಕ ಅಂಚಿನ ಮೇಲೆ ಪರಿಣಾಮ ಬೀಳುವ ಹಿನ್ನಲೆಯಿಂದಾಗಿ ಹತ್ತಿ ಜವಳಿ ರಫ್ತುಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು FIEO ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. * ಇತ್ತೀಚೆಗೆ ಭಾರತವು, US ಹಾಗೂ ಅನೇಕ ದೇಶಗಳಲ್ಲಿ ಉಡುಪು ರಫ್ತಿನಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿ ಕೊಂಡಿದೆ ಹಾಗೂ UAE ಹಾಗೂ ಆಸ್ಟ್ರೇಲಿಯಾ ದೇಶಗಳ ಜೊತೆಗೆ CEPA ಗೆ ಸಹಿ ಹಾಕುವು ಮೂಲಕ ಮತ್ತಷ್ಟು ವೇಗವಾಗಲಿದೆ ಎಂದಿದ್ದಾರೆ. ಇದಷ್ಟೇ ಅಲ್ಲದೇ UK, ಕೆನಡಾ, EU, GCC ಹಾಗೂ SACU ಜೊತೆಗೆ ಇದೇ ರೀತಿಯಲ್ಲಿ ವ್ಯವಸ್ಥೆಗಳನ್ನು ರೂಪಿಸಿಕೊಂಡು ತನ್ನ ಮಾರುಕಟ್ಟೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ. * ಇದೀಗ ಕೇಂದ್ರ ಸರ್ಕಾರವು ಜವಳಿ ಕ್ಷೇತ್ರಕ್ಕೆ ಎಲ್ಲಾ ಬೆಂಬಲವನ್ನು ನೀಡುತ್ತಿದೆ.ಹಾಗೂ 2030 ರ ವೇಳೆಗೆ ಜವಳಿ ರಫ್ತಿನಲ್ಲಿ USD 100 ಶತಕೋಟಿ ತಲುಪುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.