Job Description: * ಪ್ರಪ್ರಥಮ ಸ್ವದೇಶಿ ನಿರ್ಮಿತ ಡಾರ್ನಿಯರ್ ವಿಮಾನವು ವಾಣಿಜ್ಯ ಹಾರಾಟವನ್ನು ಆರಂಭಿಸಿದೆ, ಈಶಾನ್ಯ ರಾಜ್ಯಗಳಿಗೆ ದೇಶದ ಇನ್ನಿತರ ಭಾಗಗಳ ಜೊತೆ ಸಂಪರ್ಕ ಹೆಚ್ಚಿಸುವದರ ಜೊತೆಗೆ ವಾಯುಯಾನ ಸೌಲಭ್ಯವನ್ನು ಕಲ್ಪಿಸಲಿದೆ. * ಅರುಣಾಚಲ ಪ್ರದೇಶದ ದೂರದ ಪ್ರದೇಶದ '05' ಪಟ್ಟಣಗಳ ಜೊತೆಗೆ ಅಸ್ಸಾಮ್ನ ದಿಬ್ರುಘರ್ಗೆ ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ, ಇದು ಈ ಮೇಡ್ ಇನ್ ಇಂಡಿಯಾ ಡಾರ್ನಿಯರ್ ವಿಮಾನ 17 ಸೀಟುಗಳನ್ನು ಹೊಂದಿದೆ. * ನಾಗರಿಕ ವಿಮಾನಯಾನ ಸಚಿವಾಲಯವು ಈಶಾನ್ಯ ರಾಜ್ಯಗಳಿಗೆ ವಾಯಯಾನ ಸಂಪರ್ಕ ಹಾಗೂ ವಿಮಾನಯಾನ ಮೂಲಸೌಕರ್ಯ ಕಲ್ಪಿಸುವ ಯೋಜನೆಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಈ ನಿಯಮದ ಅನುಸಾರವಾಗಿ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ. * ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನಿರ್ಮಿಸಿರುವ ಡಾರ್ನಿಯರ್ ಡು-228 ವಿಮಾನವು ಅಲಯನ್ಸ್ ಏರ್ ಮೂಲಕ ಅಸ್ಸಾಮ್ನ ದಿಬ್ರುಘರ್ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ಮಧ್ಯೆ ಸಂಚರಿಸಲಿದೆ. ಇದೀಗ ಅಲಯನ್ಸ್ ಏರ್ಗೆ '02' ವಿಮಾನಗಳನ್ನು ಒಪ್ಪಂದದ ಮೇರೆಗೆ ನೀಡಲಾಗಿದೆ ಎಂದಿದ್ದಾರೆ. * ಡಾರ್ನಿಯರ್ ಇದು ಜರ್ಮನಿ ನಿರ್ಮಿತ ವಿಮಾನವಾಗಿದೆ, ಈ ಹಿಂದೆ 1981 ರಲ್ಲಿ HAL ಇದರ ಉತ್ಪಾದನೆ ಪರವಾನಗಿ ಪಡೆದು ಅಸೆಂಬ್ಲ್ ಮಾಡಲಾಗುತ್ತಿತ್ತು. ಈ ಹಿಂದೆ ಕಾನ್ಪುರದಲ್ಲಿ ಅಂತಹ 125 ವಿಮಾನಗಳನ್ನು ನಾಗರಿಕ ಹಾಗೂ ಸೇನಾ ಹಾರಾಟಕ್ಕಾಗಿ ಮಾಡಿಕೊಡಲಾಗಿತ್ತು. 2009 ರಿಂದ ಸ್ವಿಸ್ ಏರೋಸ್ಪೇಸ್ ಇಂಜಿನಿಯರಿಂಗ್ ಆಯಂಡ್ ಡಿಫೆನ್ಸ್ ಕಂಪನಿ ಆರ್ಯುಎಜಿ ಸುಧಾರಿತ ಡಾರ್ನಿಯರ್ ಡು-228 ನ್ಯೂ ಜನರೇಷನ್ ಫ್ಯೂಸಲೇಜ್, ವಿಂಗ್ಸ್ ಹಾಗೂ ಟೇಲ್ಸ್ HAL ನಿಂದ ಪಡೆದು ನಿರ್ಮಾಣ ಮಾಡಲಾಗುತಿತ್ತು. ಆದರೆ ಇದೀಗ ಇವುಗಳನ್ನು ವಾಣಿಜ್ಯ ಹಾರಾಟಕ್ಕೆ ಬಿಡಲಾಗಿರುವ ಡಾರ್ನಿಯರ್ 228 ಎನ್ಜಿ ಸಂಪೂರ್ಣವಾಗಿ ಸ್ವದೇಶದಲ್ಲೇ ಸ್ಥಳೀಯವಾಗಿ ನಿರ್ಮಿಸಲಾಗಿರುವ ಮೊಟ್ಟ ಮೊದಲ ವಿಮಾನವಾಗಿದೆ.