Job Description: * ಇತ್ತೀಚಿಗೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ದೇಶಕ್ಕೆ ಭಾರತ ಸರ್ಕಾರ ಹೆಚ್ಚುವರಿಯಾಗಿ 15,200 ಕೋಟಿ ರೂ. ನೆರವು ನೀಡಲು ಮುಂದಾಗಿದೆ. * ಇತ್ತೀಚಿನ ವರ್ಷಗಳಲ್ಲಿ ಶ್ರೀಲಂಕಾ ದೇಶವು ಚೀನಾ ದೇಶವನ್ನು ಅತೀ ಹೆಚ್ಚಾಗಿ ಅವಲಂಬಿಸಿತ್ತು, ಇದೀಗ ಶ್ರೀಲಂಕಾ ದೇಶವನ್ನು ಚೀನಾದ ಪ್ರಭಾವದಿಂದ ಹೊರ ತರಲು ಭಾರತೀಯ ಕೇಂದ್ರ ಸರ್ಕಾರವು ಅನೇಕ ರೀತಿಯಲ್ಲಿ ಸಹಾಯವನ್ನು ನೀಡುತ್ತಿದೆ. ಅದರಲ್ಲಿಯೂ ದ್ವೀಪ ರಾಷ್ಟ್ರಕ್ಕೆ ಅಗತ್ಯ ಆಹಾರ ಹಾಗೂ ಇಂಧನ ಪೂರೈಕೆ ಮಾಡಲು ಮುಂದಾಗಿದೆ. * ಪ್ರಸ್ತುತ ಸಂಕಷ್ಟದಲ್ಲಿರುವ ಲಂಕಾಗೆ ಭಾರತವು ತನ್ನ ಶಕ್ತಿಮೀರಿ ಸಹಾಯವನ್ನು ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಹೇಳಿಕೆ ನೀಡಿದ್ದಾರೆ. * ಇತ್ತೀಚಿಗೆ ಚೀನಾ ದೇಶವು ಶ್ರೀಲಂಕಾಕ್ಕೆ ಸರಿ ಸುಮಾರು 350 ಕೋಟಿ ಡಾಲರ್‌ ಸಾಲ ನೀಡಿದೆ. ಹಾಗೂ ದ್ವೀಪ ರಾಷ್ಟ್ರದಲ್ಲಿ ಬಂದರುಗಳು, ರಸ್ತೆಗಳನ್ನು ನಿರ್ಮಿಸಿದೆ. ಈ ಹಿನ್ನಲೆಯಿಂದಾಗಿ 'ಚೀನಾದ ಸಾಲ ತೀರಿಸಲು ಶ್ರೀಲಂಕಾವು ಭಾರತದ ನೆರವನ್ನು ಕೇಳುತ್ತಿದೆ. ಶ್ರೀಲಂಕಾದ ಈ ಮನವಿಗೆ ಭಾರತವು ಸಮ್ಮತಿಯನ್ನು ನೀಡುತ್ತಿದೆ, ಇದರಿಂದಾಗಿ ಚೀನಾ ದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ದ್ವೀಪ ರಾಷ್ಟ್ರಕ್ಕೆ ಅಗತ್ಯ ನೆರವು ನೀಡಲು ಭಾರತವು ಮುಂದಾಗಿದೆ. ಇದರ ಜೊತೆಗೆ ಭಾರತವು ಶ್ರೀಲಂಕಾದ ಪ್ರಬಲ ಪಾಲುದಾರನಾಗಲು ಬಯಸುತ್ತಿದೆ ಎಂದಿದ್ದಾರೆ.