Job Description: * ರಷ್ಯಾ ಕೆಲವು ಯುದ್ಧ ನೌಕೆಗಳು ಉಕ್ರೇನ್‌ನ ದಕ್ಷಿಣ ಭಾಗಕ್ಕಿರುವ ಕಪ್ಪು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದವು, ಇದೀಗ ಈ ನೌಕೆಗಳ ಮೇಲೆ ಉಕ್ರೇನ್‌ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ. ಮುಖ್ಯವಾಗಿ ಮೊಸ್ಕಾವಾ ಎಂಬ ಯುದ್ಧ ನೌಕೆಯನ್ನು 'ನೆಪ್ಚ್ಯೂನ್‌’ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ಉಕ್ರೇನ್‌ ಸೇನೆಯು ಮಾಹಿತಿ ನೀಡಿದೆ. * ರಷ್ಯಾದ ರಕ್ಷಣಾ ಇಲಾಖೆ ಕೂಡ ಮೊಸ್ಕಾವಾ ಹಡಗಿನ ಮೇಲೆ ಉಕ್ರೇನ್‌ ದಾಳಿ ನಡೆಸಿದೆ ಎಂಬುವದನ್ನು ಒಪ್ಪಿಕೊಂಡಿದೆ. ಆದರೆ ಈ ಯುದ್ಧ ನೌಕೆಗೆ ಏನೂ ಆಗಿಲ್ಲ ಎಂದು ರಷ್ಯಾ ತಿಳಿಸಿದೆ. ಆದರೆ ಅಲ್ಲಿನ ಅನೇಕ ಮೂಲಗಳು ಆ ನೌಕೆಯು ಈಗಾಗಲೇ ಸಮುದ್ರದಲ್ಲಿ ಮುಳುಗಲಾರಂಭಿಸಿದೆ ಎಂದು ಹೇಳಿದ್ದಾರೆ. * ಇದೀಗ ರಷ್ಯಾ ಸೇನೆಯು ಮಾಹಿತಿ ನೀಡಿರುವ ಪ್ರಕಾರ ಉಕ್ರೇನ್‌ ಸೇನೆಯ 36 ನೇ ಇನ್‌ಫ್ಯಾಂಟ್ರಿ ಬ್ರಿಗೇಡ್‌ನ‌ 1026 ಯೋಧರು ತನಗೆ ಶರಣಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇಲ್ಲಿ ಶರಣಾಗಿರುವ ಸೈನಿಕರ ಪೈಕಿ 162 ಅಧಿಕಾರಿಗಳು, ಹಾಗೂ 47 ಮಹಿಳಾ ಯೋಧರಿದ್ದಾರೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ವಕ್ತಾರರಾಗಿರುವ ಮೇಜರ್‌ ಜನರಲ್‌ ಐಗರ್‌ ಕೊನೆಶೆಂಕೋವ್‌ ಅವರು ಹೇಳಿಕೆ ನೀಡಿದ್ದಾರೆ. * ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಉಕ್ರೇನ್‌ಗೆ ಸುಮಾರು 6 ಸಾವಿರ ಕೋಟಿ ರೂ. ಮೌಲ್ಯದ ಸೇನಾ ಪ್ಯಾಕೇಜ್‌ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಅದರಲ್ಲಿ ಆಧುನಿಕ ಶಸ್ತ್ರಾಸ್ತ್ರ, ಶಸ್ತ್ರಾಸ್ತ್ರ ಸಾಗಣೆ ವಾಹನಗಳು, ಹಾಗೂ ಹೆಲಿಕಾಪ್ಟರ್‌ಗಳು ಇರಲಿವೆ. ಇವೆಲ್ಲವೂ ಉಕ್ರೇನ್ ರಾಷ್ಟ್ರಕ್ಕೆ ಲಭ್ಯವಾಗಲಿವೆ ಎಂದಿದ್ದಾರೆ.