Job Description: * ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (UNDP)ಹಾಗೂ ಅಡಾಪ್ಟೇಶನ್ ಇನ್ನೋವೇಶನ್ ಮಾರ್ಕೆಟ್‌ಪ್ಲೇಸ್ (AIM)ನ ಪಾಲುದಾರರು 19 ದೇಶಗಳ 22 ಸ್ಥಳೀಯ ಆವಿಷ್ಕಾರಕರಿಗೆ ಹವಾಮಾನ ಕ್ರಿಯೆಯ ನಿಧಿಯಲ್ಲಿ USD 2.2 ಮಿಲಿಯನ್ ಘೋಷಣೆ ಮಾಡಿದ್ದಾರೆ, ಇದರಲ್ಲಿ ಭಾರತವು ಸೇರಿಕೊಂಡಿದೆ. * ಇದೀಗ ಅಡಾಪ್ಟೇಶನ್ ಫಂಡ್ ಕ್ಲೈಮೇಟ್ ಇನ್ನೋವೇಶನ್ ಆಕ್ಸಿಲರೇಟರ್ (AFCIA) ವಿಂಡೋದ ಮೊದಲ ಸುತ್ತಿನ ನಿಧಿಯು ಸ್ಥಳೀಯ ಹವಾಮಾನ ಕ್ರಿಯೆಯನ್ನು ಸುಧಾರಿಸಲು ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಪ್ಯಾರಿಸ್ ಒಪ್ಪಂದದ ಮಹತ್ವಾಕಾಂಕ್ಷೆಗಳ ಸಾಧನೆಗಳನ್ನು ವೇಗಗೊಳಿಸಲು ಕಾದುಕುಳಿತಿದೆ. ಈ ಯೋಜನೆಯಿಂದಾಗಿ ಸ್ಥಳೀಯ ಸಂಸ್ಥೆಗಳನ್ನು ಸಕ್ರಿಯಗೊಳಿಸಲಾಗುತ್ತದೆ ಹಾಗು ಸ್ಥಳೀಯವಾಗಿ ಚಾಲಿತ ಹೊಂದಾಣಿಕೆಯ ಕ್ರಿಯೆಗಾಗಿ UNDP ಹಾಗೂ ವಿಶ್ವದಾದ್ಯಂತ ಅದರ ಪಾಲುದಾರರಿಗೆ ಅನೇಕ ಕೊಡುಗೆಗಳನ್ನೂ ಕಲ್ಪಿಸಲಿದೆ. * ಪ್ರಸ್ತುತ ಆರಂಭಿಸಲಾಗಿರುವ ಎಲ್ಲಾ ಹೊಸ ಫಂಡಿಂಗ್ ಅಪ್ಲಿಕೇಶನ್‌ಗಳಿಗೆ AIM ತಾಂತ್ರಿಕ ಬೆಂಬಲವನ್ನು ನೀಡುತ್ತದೆ. 2021 ರ ಜನವರಿಯಲ್ಲಿ ಹವಾಮಾನ ಅಡಾಪ್ಟೇಶನ್ ಶೃಂಗಸಭೆಯಲ್ಲಿ UNDP ನಿರ್ವಾಹಕರಾಗಿದ್ದ ಅಚಿಮ್ ಸ್ಟೈನರ್ ಅವರು AIM ನ್ನು ಆರಂಭಿಸಿದ್ದಾರೆ. ಇದೊಂದು ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಮಾಜ, ಯುವ ನವೋದ್ಯಮಿಗಳು ಹಾಗೂ ಮಹಿಳೆಯರ ಮೇಲೆ ಸ್ಥಳೀಯವಾಗಿ ಸ್ಕೇಲ್ಡ್-ಅಪ್ ರೂಪಾಂತರಕ್ಕೆ ಉತ್ತೇಜನವನ್ನು ನೀಡುವ ವೇದಿಕೆಯಾಗಿದೆ. * 2022 ರಲ್ಲಿ AIM ನ ಪಾಲುದಾರರು AFCIA ಅನುದಾನದ ಮೊದಲನೇ ಸುತ್ತಿನಲ್ಲಿ ವಿತ್ತೀಯ ಬೆಂಬಲವನ್ನು ಪಡೆದುಕೊಂಡಿರುವ 22 ಸ್ಥಳೀಯ ಪಾಲುದಾರರಿಗೆ ದಕ್ಷಿಣ-ದಕ್ಷಿಣ ಸಮನ್ವಯ ಹಾಗೂ ಜ್ಞಾನ ಹಂಚಿಕೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದಿದ್ದಾರೆ. * ಅನುದಾನವನ್ನು 19 ದೇಶಗಳಿಗೆ ವಿತರಿಸಲಾಗಿದೆ ಅವುಗಳಲ್ಲಿ '07' ಆಫ್ರಿಕಾದಿಂದ, '11' ಏಷ್ಯಾದಿಂದ ಹಾಗೂ '04' ಕೆರಿಬಿಯನ್ ಹಾಗೂ ಲ್ಯಾಟಿನ್ ಅಮೆರಿಕದಿಂದ ಬಂದಿವೆ. ಇದರಲ್ಲಿ ಭಾಗವಹಿಸುವ 22 ರಲ್ಲಿ 10 ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು ಅಥವಾ ಸಣ್ಣ ದ್ವೀಪ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಿಂದ ಬಂದಿವೆ. ಹಾಗೆಯೆ ತಂತ್ರಜ್ಞಾನ, ಸ್ಥಿತಿಸ್ಥಾಪಕ ಕೃಷಿ, ಪರಿಸರ ವ್ಯವಸ್ಥೆ ಆಧಾರಿತ ಪಾವತಿಗಳು, ಸಮುದಾಯ ಆಧಾರಿತ ರೂಪಾಂತರ, ಸೇವೆಗಳು ಹಾಗೂ ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಹಣವನ್ನು ಕಲ್ಪಿಸಲಾಗುತ್ತದೆ.